reservation ರೆಸರ್ವೇಷನ್‍
ನಾಮವಾಚಕ
  1. (ವಸ್ತುವನ್ನು ಮುಂದೆಂದೋ ಬಳಸಲು ಯಾ ಅನುಭವಿಸಲು, ಕೆಲಸವನ್ನು ಮುಂದೆಂದೋ ಮಾಡಲು) ಕಾಯ್ದಿಟ್ಟಿರುವಿಕೆ; ಕಾದಿರಿಸುವಿಕೆ; ಮೀಸಲಾಗಿಡುವುದು.
  2. (ಸ್ವಶಕ್ತಿಯನ್ನು ಈಗಲೇ ವ್ಯಯಮಾಡದೆ ಸಕಾಲದಲ್ಲಿ ಬಳಸಲು) ಕಾಪಿಟ್ಟುಕೊಳ್ಳುವುದು.
    1. (ವಿಧಾಯಕದ ಕ್ರಮದಲ್ಲಿ ಮುಂಚಿತವಾಗಿ ಗೊತ್ತುಮಾಡಿಕೊಂಡ, ತಕ್ಕ ಶುಲ್ಕ ಮೊದಲಾದವನ್ನು ಸಲ್ಲಿಸಿ, ರೈಲು ಮೊದಲಾದ ವಾಹನ, ಸಿನಿಮಾ ಮಂದಿರ, ಹೋಟೆಲು ಮೊದಲಾದವುಗಳಲ್ಲಿ) ಸ್ಥಳಾವಕಾಶವನ್ನು ಕಾದಿರಿಸಿಕೊಳ್ಳುವುದು.
    2. ಹಾಗೆ ಕಾದಿರಿಸಿದ್ದು, ಉದಾಹರಣೆಗೆ ಹೋಟೆಲಿನ ರೂಮು.
  3. (ನ್ಯಾಯಶಾಸ್ತ್ರ)
    1. (ದಸ್ತಾವೇಜಿನ ಮೂಲಕ ಬೇರೊಬ್ಬರಿಗೆ ವಶಮಾಡಿಕೊಡುವ ಆಸ್ತಿಯಲ್ಲಿ ತನಗಾಗಿ) ಕಾಯ್ದಿಟ್ಟುಕೊಂಡಿರುವ ಹಕ್ಕು; ಮೀಸಲು ಹಕ್ಕು.
    2. (ಬೇರೊಬ್ಬರಿಗೆ ಕಾಯಿದೆ ಪ್ರಕಾರ ವಶಮಾಡಿಕೊಡುವ ಆಸ್ತಿಯಲ್ಲಿ ತನಗಾಗಿ) ಕಾದಿರಿಸಿದ ಹಕ್ಕನ್ನು ಒಳಗೊಂಡ ದಸ್ತಾವೇಜಿನ ಕಲಮು ಯಾ ಷರತ್ತು.
    3. (ಕಾಯಿದೆ ಮೂಲಕ ಯಾವುದೇ ವ್ಯಕ್ತಿಗಾಗಿ ಯಾ ವರ್ಗಕ್ಕಾಗಿ) ಕಾದಿರಿಸಿದ ಹಕ್ಕು; ಮೀಸಲಾತಿ ಹಕ್ಕು.
  4. (ರೋಮನ್‍ ಕ್ಯಾಥೊಲಿಕ್‍) ಮೀಸಲು:
    1. (ಯಾವುದೇ ಚರ್ಚಿನ ಮಾನ್ಯ ಯಾ ವೃತ್ತಿ ಖಾಲಿ ಬಿದ್ದಾಗ ಅದಕ್ಕೆ ಮತಾಧಿಕಾರಿಯನ್ನು ನೇಮಿಸಲು) ಪೋಪ್‍ಗಿರುವ ಮೀಸಲು ಹಕ್ಕು.
    2. (ಚರ್ಚಿನ ಅನುಯಾಯಿಗಳಿಗೆ ಪಾಪವಿಮೋಚನವನ್ನು ಕರುಣಿಸಲು) ಪ್ರಧಾನ ಮತಾಧಿಕಾರಿಗೆ ಇರುವ ಹಕ್ಕು.
    3. (ಪ್ರಭುಭೋಜನ ಸಂಸ್ಕಾರದ ಪ್ರಸಾದದಲ್ಲಿ, ಉದಾಹರಣೆಗೆ ಬ್ರೆಡ್ಡಿನಲ್ಲಿ, ಮುಂದೆ ವಿನಿಯೋಗಿಸಲು ಉಳಿಸಿಕೊಳ್ಳುವ) ಮೀಸಲು ಪ್ರಸಾದ.
  5. (ಅಮೆರಿಕನ್‍ ಪ್ರಯೋಗ) (ರೆಡ್‍ ಇಂಡಿಯನ್‍ ಮೊದಲಾದ ಬುಡಕಟ್ಟುಗಳ ವಸತಿಗಾಗಿ ಕಾಯ್ದಿಟ್ಟಿರುವ) ಮೀಸಲು ಪ್ರದೇಶ.
  6. (ಒಪ್ಪಂದ ಮೊದಲಾದವುಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ ಯಾ ಸೂಚ್ಯವಾಗಿ ತಿಳಿಸಿದ)
    1. ಗುಪ್ತಾಂಶ; ರಹಸ್ಯಾಂಶ.
    2. ವಿನಾಯಿತಿ.
    3. ಉಪಾಧಿ; ಷರತ್ತು.
    4. ಪರಿಮಿತಿ; ಎಲ್ಲೆಕಟ್ಟು.
  7. (ಬ್ರಿಟಿಷ್‍ ಪ್ರಯೋಗ) ಮೀಸಲು ಪಥ, ಹಾದಿ; ವಾಹನಗಳಿಗೇ ಮೀಸಲಾದ ಹಾದಿಗಳ ನಡುವಣ ಭೂಭಾಗ, ಭೂಮಿಯ ಪಟ್ಟೆ, ಹಾದಿ.
  8. ಮೀಸಲು ಪ್ರದೇಶ; ಅಮೆರಿಕನ್‍ ಇಂಡಿಯನ್ನರು, ಆಹ್ರಿಕನ್‍ ಕರಿಯರು ಅಥವಾ ಆಸ್ಟ್ರೇಲಿಯನ್‍ ಮೂಲನಿವಾಸಿಗಳು ಮೊದಲಾದವರಿಗಾಗಿ ಮೀಸಲಾಗಿಟ್ಟ ಪ್ರದೇಶ.