rescript ರೀಸ್ಕ್ರಿಪ್ಟ್‍
ನಾಮವಾಚಕ
  1. (ರೋಮನ್‍ ಚರಿತ್ರೆ) (ಮುಖ್ಯವಾಗಿ ಕಾನೂನಿನ ವಿಷಯದಲ್ಲಿ ಮ್ಯಾಜಿಸ್ಟ್ರೇಟ್‍ ಕೋರಿದ ಮಾರ್ಗದರ್ಶನಕ್ಕಾಗಿ) ರೋಮನ್‍ ಚಕ್ರವರ್ತಿಯು ನೀಡುತ್ತಿದ್ದ ಲಿಖಿತ ಉತ್ತರ, ಆಜ್ಞೆ.
    1. (ಸಿದ್ಧಾಂತ ಯಾ ಚರ್ಚು ಕಾನೂನಿನ ವಿಷಯದಲ್ಲಿ,\ ಯಾವುದೇ ಪ್ರಶ್ನೆಗೆ ಉತ್ತರವಾಗಿ ಯಾ ಸಮಸ್ಯೆಗೆ ಪರಿಹಾರವಾಗಿ) ಪೋಪನು ನೀಡುವ ಲಿಖಿತ ತೀರ್ಪು.
    2. ಪೋಪನ ಯಾವುದೇ ತೀರ್ಪು, ನಿರ್ಣಯ.
  2. (ರಾಜನ ಯಾ ಸರ್ಕಾರದ ಯಾ ಅಧಿಕಾರಿಯ) ವಿಧ್ಯುಕ್ತಶಾಸನ ಯಾ ಘೋಷಣೆ; ಪ್ರಸಿದ್ಧಪಡಿಸಿದ ವಾರ್ತೆ ಯಾ ಲಿಖಿತ ಆಜ್ಞೆ.
  3. ಪುನರ್ಲೇಖನ; ಮರುಬರಹ:
    1. ಬರೆದ್ದನ್ನು ಅಳಿಸಿ ಮತ್ತೆ ಯಾ ಬೇರೆ ರೀತಿಯಲ್ಲಿ ಬರೆಯುವುದು.
    2. ಹಾಗೆ ಮತ್ತೆ ಬರೆದ ಬರಹ; ಪುನರ್ಲಿಖಿತ ಬರಹ.