See also 2requisition
1requisition ರೆಕ್ವಿಸಿಷನ್‍
ನಾಮವಾಚಕ
  1. (ವ್ಯಕ್ತಿಗೆ ಯಾ ಸಂಸ್ಥೆಗೆ) ಅಪ್ಪಣೆ ಮಾಡುವುದು.
  2. (ಆಸ್ತಿ ಯಾ ವಸ್ತುಗಳನ್ನು ಬಳಸಲು ಹಕ್ಕು ಹೂಡುವ ಯಾ ಯಾವುದೇ ಕರ್ತವ್ಯವನ್ನು ನೆರವೇರಿಸಬೇಕೆಂದು ಮುಖ್ಯವಾಗಿ ವಿಧ್ಯುಕ್ತವಾಗಿ ಮಾಡಿದ) ಲಿಖಿತ ಕೋರಿಕೆ ಯಾ ಆಜ್ಞಾಪತ್ರ.
  3. (ಪಟ್ಟಣ ಮೊದಲಾದವಕ್ಕೆ ಸೈನಿಕ ಸರಬರಾಜು ಮೊದಲಾದವನ್ನು ಒದಗಿಸಬೇಕೆಂದು ಮಾಡಿದ) ಅಪ್ಪಣೆ; ಆದೇಶ.
  4. (ಯಾವುದೇ ಸೇವೆಯಲ್ಲಿ, ಮುಖ್ಯವಾಗಿ ಸೈನಿಕ ಸೇವೆಯಲ್ಲಿ) ಕಡ್ಡಾಯವಾಗಿ ಕರೆಯಲ್ಪಡುವುದು ಯಾ ನಿಯುಕ್ತನಾಗುವುದು: he is in (or under) requisition ಅವನನ್ನು ಸೇವೆಗಾಗಿ (ಒತ್ತಾಯದಿಂದ) ಕರೆಯಲಾಗಿದೆ, ನಿಯುಕ್ತಗೊಳಿಸಲಾಗಿದೆ.
ಪದಗುಚ್ಛ
  1. call into requisition (ವ್ಯಕ್ತಿ, ಪಡೆ ಮೊದಲಾದವನ್ನು) ಸೇವೆಗಾಗಿ ಕರೆ ಯಾ ಸೇವೆಯಲ್ಲಿ ನಿಯೋಜಿಸು.
  2. put in requisition (ವ್ಯಕ್ತಿ, ಪಡೆ, ಯಂತ್ರ ಮೊದಲಾದವನ್ನು) ನಿಯೋಜಿಸು; ಸೇವೆಯಲ್ಲಿ ತೊಡಗಿಸು.
  3. under (or in) requisition ಬಳಸುತ್ತಿರುವ; ಉಪಯೋಗಿಸುತ್ತಿರುವ.
See also 1requisition
2requisition ರೆಕ್ವಿಸಿಷನ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಯುದ್ಧಕ್ಕಾಗಿ, ವ್ಯಕ್ತಿಯ ಸೇವೆಯನ್ನು ಯಾ ವಸ್ತುಗಳ ಸರಬರಾಜನ್ನು, ಬಳಕೆಯನ್ನು ಮುಖ್ಯವಾಗಿ ವಿಧಿವತ್ತಾದ ಲಿಖಿತ ಅಜ್ಞೆಯ ಮೂಲಕ) ಒತ್ತಾಯವಾಗಿ ಯಾ ಕಡ್ಡಾಯವಾಗಿ ಕೋರು.
  2. (ಯಾವುದೇ ಕಾರ್ಯದಲ್ಲಿ, ಸೇವೆಯಲ್ಲಿ) ನಿಯೋಜಿಸು; ತೊಡಗಿಸು.
  3. (ಯಾವುದೇ ಕಾರ್ಯಕ್ಕಾಗಿ, ಉದ್ದೇಶಕ್ಕಾಗಿ) ಒತ್ತಾಯ ಪೂರ್ವಕವಾಗಿ ಕರೆ ಯಾ ಬಳಸು.