require ರಿಕ್ವೈಅರ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಕೆಲಸವನ್ನು ಮಾಡಬೇಕೆಂದು ಒಬ್ಬನಿಗೆ) ಅಪ್ಪಣೆಮಾಡು; ಒತ್ತಾಯವಾಗಿ ಹೇಳು: they require me to appear ನಾನು ಹಾಜರಾಗಬೇಕೆಂದು ಅವರು ಅಪ್ಪಣೆಮಾಡಿದ್ದಾರೆ.
  2. (ವ್ಯಕ್ತಿಯಿಂದ, ಯಾವುದೇ ವಸ್ತುವನ್ನು ಯಾ ಕಾರ್ಯವನ್ನು ತನ್ನ ಹಕ್ಕಾಗಿ) ಕೋರು; ಒತ್ತಾಯವಾಗಿ ಕೇಳಿಕೊ: they require an oath of me ನಾನು ಪ್ರಮಾಣ ಮಾಡಬೇಕೆಂದು ಅವರು ಒತ್ತಾಯವಾಗಿ ಕೋರುತ್ತಾರೆ. they require a gift of me ನನ್ನಿಂದ ಕೊಡುಗೆಯೊಂದನ್ನು ಕಡ್ಡಾಯವಾಗಿ ಅವರು ಬಯಸುತ್ತಾರೆ.
  3. (ಮಾಡಿಯೇ ತೀರಬೇಕೆಂದು) ವಿಧಿಸು; (ಅವಶ್ಯ ಕರ್ತವ್ಯವೆಂದು) ವಿಧಾಯಕ ಮಾಡು: the Act requires this procedure ಕಾನೂನು ಈ ಕಾರ್ಯವಿಧಾನವನ್ನು ವಿಧಿಸಿದೆ.
  4. ಅಗತ್ಯಗೊಳಿಸು; ಅನಿವಾರ್ಯವನ್ನಾಗಿ ಮಾಡು; ಅತ್ಯಾವಶ್ಯಕವಾಗಿ ಕೋರು, ಬಯಸು: irony requires the greatest care ವ್ಯಂಗ್ಯಕ್ಕೆ ಅತ್ಯಂತ ಜಾಗರೂಕತೆ ಅಗತ್ಯ; ವ್ಯಂಗ್ಯವು ಅತ್ಯಂತ ಜಾಗರೂಕತೆಯನ್ನು ಅನಿವಾರ್ಯವಾಗಿ ಕೋರುತ್ತದೆ.
  5. (ಯಶಸ್ಸಿಗೆ ಯಾ ಸಾಧನೆಗೆ) ಆವಶ್ಯಕವಾಗಿರು; ಅಗತ್ಯವಾಗಿರು; ಬೇಕಾಗಿರು: the work requires much patience ಆ ಕೆಲಸಕ್ಕೆ ತುಂಬ ಸಹನೆ ಆವಶ್ಯಕ.
  6. (ವ್ಯಕ್ತಿ ಮೊದಲಾದವರಿಗೆ) ಆದೇಶಿಸು; ಅಪ್ಪಣೆ ಕೊಡು.
  7. ಬೇಕೆಂದು ಬಯಸು: is there anything else you require? ನೀನು ಇನ್ನೇನಾದರೂ ಬೇಕೆಂದು ಬಯಸುವೆಯಾ?
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ವಿರಳ ಪ್ರಯೋಗ) ಅಗತ್ಯವಾಗು; ಅವಶ್ಯವಾಗು: do not tie it more tightly than requires ಅವಶ್ಯವಾದದ್ದಕ್ಕಿಂತ ಹೆಚ್ಚು ಬಿಗಿಯಾಗಿ ಅದನ್ನು ಕಟ್ಟಬೇಡ.