See also 2request
1request ರಿಕ್ವೆಸ್ಟ್‍
ನಾಮವಾಚಕ
  1. (ಯಾವುದನ್ನೇ ಕೊಡಿ ಯಾ ನೆರವೇರಿಸಿ ಎಂಬ) ಕೇಳಿಕೆ; ಕೋರಿಕೆ; ಬೇಡಿಕೆ; ಮನವಿ; ಪ್ರಾರ್ಥನೆ; ಅಹವಾಲು; ವಿನಂತಿ; ಬಿನ್ನಹ: I came at his request ಆತನ ಕೋರಿಕೆಯಂತೆ ನಾನು ಬಂದೆ.
  2. (ಸರಕುಗಳು ಮೊದಲಾದವುಗಳ ವಿಷಯದಲ್ಲಿ) ಕೋರಿಕೊಂಡ ಯಾ ಕೋರಲ್ಪಡುತ್ತಿರುವ ಸ್ಥಿತಿ; ಕೋರಿಕೆ; ಬೇಡಿಕೆ; ಗಿರಾಕಿ: these goods are now in great request ಈ ಸರಕುಗಳಿಗೆ ಈಗ ಭಾರಿ ಕೋರಿಕೆ, ಗಿರಾಕಿ ಇದೆ.
  3. ಕೇಳಿದ, ಕೋರಿದ ವಸ್ತು.
  4. (ಒಂದು ನಿರ್ದಿಷ್ಟ ಧ್ವನಿಮುದ್ರಣ ಮೊದಲಾದವನ್ನು ರೇಡಿಯೋ ಕಾರ್ಯಕ್ರಮದಲ್ಲಿ ಹಾಕಲು ಕೊಡುವ, ಅನೇಕವೇಳೆ ವೈಯಕ್ತಿಕ ಸಂದೇಶದಿಂದ ಕೂಡಿದ) ಕೋರಿಕೆ ಪತ್ರ ಮೊದಲಾದವು.
ಪದಗುಚ್ಛ

by (or on) request ಕೋರಿಕೆಯ–ಮೇರೆಗೆ, ಪ್ರಕಾರ.

See also 1request
2request ರಿಕ್ವೆಸ್ಟ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡಲು) ಅಪ್ಪಣೆಕೋರು; ಅನುಮತಿ ಬೇಡು.
  2. (ಯಾವುದನ್ನೇ ಕೊಡಬೇಕೆಂದು ಯಾ ನೆರವೇರಿಸಿಕೊಡಬೇಕೆಂದು ಯಾ ಅನುಗ್ರಹಿಸಬೇಕೆಂದು) ಕೋರು; ಬೇಡು; ಪ್ರಾರ್ಥಿಸು; ಮನವಿಮಾಡಿಕೊ: request someone’s presence ಯಾರನ್ನೇ ಬರಬೇಕೆಂದು, ಇರಬೇಕೆಂದು–ಕೋರು; ಯಾವನೇ ವ್ಯಕ್ತಿಯ ಉಪಸ್ಥಿತಿಯನ್ನು ಬೇಡು.
  3. (ಒಬ್ಬನನ್ನು) ಮಾಡೆಂದು ಕೋರು, ಕೇಳಿಕೊ: requested her to answer ಉತ್ತರ ಬರೆಯಬೇಕೆಂದು, ಕೊಡಬೇಕೆಂದು ಅವಳನ್ನು ಕೋರಿದ.