reputation ರೆಪ್ಯುಟೇಷನ್‍
ನಾಮವಾಚಕ
  1. (ವ್ಯಕ್ತಿಯ ಯಾ ವಸ್ತುವಿನ) ಹೆಸರುವಾಸಿ; ಹೆಸರು; ಪ್ರಸಿದ್ಧಿ; ಪ್ರಖ್ಯಾತಿ: he has kept up his reputation ತನ್ನ ಹೆಸರುವಾಸಿಯನ್ನವನು ಉಳಿಸಿಕೊಂಡಿದ್ದಾನೆ.
  2. ಕೀರ್ತಿ; ಯಶಸ್ಸು; ಖ್ಯಾತಿ: he has a reputation for integrity ಆತ ತನ್ನ ಪ್ರಾಮಾಣಿಕತೆಗಾಗಿ ಕೀರ್ತಿ ಪಡೆದಿದ್ದಾನೆ.
  3. (ಇಂಥವನೆಂಬ ಯಾ ಹೀಗೆ ವರ್ತಿಸುತ್ತಾನೆಂಬ) ಹೆಸರು; ಖ್ಯಾತಿ; ನೆಗಳ್ತೆ (ಗ್ರಾಂಥಿಕ ಪ್ರಯೋಗ); ಒಳ್ಳೆಯ ಯಾ ಕೆಟ್ಟ ಹೆಸರು; ಕೀರ್ತಿ ಯಾ ಅಪಕೀರ್ತಿ: he has the reputation of the best shot in England ಇಂಗ್ಲೆಂಡಿನಲ್ಲೇ ಅತ್ಯುತ್ತಮ ಗುರಿಗಾರನೆಂಬ ಕೀರ್ತಿಯನ್ನು ಅವನು ಪಡೆದಿದ್ದಾನೆ. he has the reputation of racking his tenants ತನ್ನ ಗುತ್ತಿಗೆದಾರರನ್ನು ಚಿತ್ರಹಿಂಸೆ ಮಾಡುತ್ತಾನೆಂಬ ಹೆಸರು ಹೊಂದಿದ್ದಾನೆ.