repudiate ರಿಪ್ಯೂಡಿಏಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪ್ರಾಚೀನ ಜನಾಂಗಗಳ ಯಾ ಕ್ರೈಸ್ತೇತರರ ವಿಷಯದಲ್ಲಿ) ಹೆಂಡತಿಯನ್ನು (ದಾಂಪತ್ಯವಿಚ್ಛೇದ ಪದ್ಧತಿಯಂತೆ)–ತೊರೆ, ಪರಿತ್ಯಜಿಸು.
  2. (ಒಬ್ಬರೊಡನೆ) ವ್ಯವಹಾರವನ್ನು ಮಾಡಲೊಲ್ಲದಿರು; ವ್ಯವಹರಿಸಲು ಸಮ್ಮತಿಸದಿರು.
  3. ನಿರಾಕರಿಸು; ತಿರಸ್ಕರಿಸು.
  4. (ಅಧಿಕಾರಕ್ಕೆ ಯಾ ಒಪ್ಪಂದಕ್ಕೆ) ಮನ್ನಣೆ ಕೊಡದಿರು; ಸಮ್ಮತಿಸದಿರು; ವಿಧೇಯತೆ ತೋರದಿರು; (ಅವನ್ನು) ಒಪ್ಪದಿರು; ಅಂಗೀಕರಿಸದಿರು.
  5. (ಹೊಣೆ, ಋಣ ಮೊದಲಾದವನ್ನು) ಅಲ್ಲಗಳೆ; ಒಪ್ಪಿಕೊಳ್ಳದಿರು; ನಿರಾಕರಿಸು; (ಹೊಣೆ, ಋಣ ಮೊದಲಾದವಕ್ಕೆ) ಬಾಧ್ಯನಲ್ಲವೆನ್ನು; ತೀರಿಸಲೊಲ್ಲದಿರು ( ಅಕರ್ಮಕ ಕ್ರಿಯಾಪದ ಸಹ).