reproduce ರೀಪ್ರಡ್ಯೂಸ್‍
ಸಕರ್ಮಕ ಕ್ರಿಯಾಪದ
  1. ನಕಲು ಮಾಡು; ಪ್ರತಿ ಮಾಡು.
  2. ಪುನರುತ್ಪಾದಿಸು; ಮತ್ತೆ ನೋಡುವಂತೆ ಯಾ ಕೇಳುವಂತೆ ಮಾಡು: tried to reproduce the sound exactly ಆ ಧ್ವನಿಯನ್ನು ತದ್ವತ್ತಾಗಿ ಪುನರುತ್ಪಾದಿಸಲು ಪ್ರಯತ್ನಿಸಿದ.
  3. (ಆತ್ಮಾರ್ಥಕ) (ಮರಿಗಳನ್ನು) ಹುಟ್ಟಿಸು; ಹೆರು; ಉತ್ಪತ್ತಿ ಮಾಡು: reproduced itself several times ಅನೇಕ ಸಲ ಮರಿಗಳನ್ನು ಹಾಕಿತು.
  4. (ಜೀವವಿಜ್ಞಾನ) (ದೇಹದ ಕಳೆದುಹೋದ ಅಂಗ ಮೊದಲಾದವನ್ನು) ಹೊಸದಾಗಿ ರೂಪಿಸಿಕೊ, ಉತ್ಪತ್ತಿ ಮಾಡಿಕೊ, ಹುಟ್ಟಿಸಿಕೊ.
ಅಕರ್ಮಕ ಕ್ರಿಯಾಪದ
  1. ಸ್ವಾಭಾವಿಕ ರೀತಿಯಲ್ಲಿ ಅದೇ ತಳಿಯ ವ್ಯಕ್ತಿಗಳನ್ನು ಸೃಷ್ಟಿಸು, ಉತ್ಪಾದಿಸು; ಉತ್ಪತ್ತಿ ಮಾಡು.
  2. ನಕಲು ಮಾಡಿದಾಗ ಒಂದು ನಿರ್ದಿಷ್ಟ ಗುಣವನ್ನು ಯಾ ಫಲಿತಾಂಶವನ್ನು ನೀಡು: reproduces badly in black and white ಕಪ್ಪುಬಿಳುಪು ಚಿತ್ರದಲ್ಲಿ ಕೆಟ್ಟದಾಗಿ ಮೂಡುತ್ತದೆ.