See also 2reprieve
1reprieve ರಿಪ್ರೀವ್‍
ಸಕರ್ಮಕ ಕ್ರಿಯಾಪದ
  1. (ದಂಡನೆಗೆ, ಮುಖ್ಯವಾಗಿ ಮರಣದಂಡನೆಗೆ, ಗುರಿಯಾಗಿರುವವನ ಶಿಕ್ಷೆಯನ್ನು, ದಂಡನೆಯನ್ನು)
    1. ಮುಂದೂಡು; ವಿಳಂಬ ಮಾಡು.
    2. ತಾತ್ಕಾಲಿಕವಾಗಿ ನಿಲ್ಲಿಸು, ಸ್ಥಗಿತಗೊಳಿಸು, ತಡೆದಿಡು.
  2. (ರೂಪಕವಾಗಿ) (ಯಾವುದೇ ಅನಿಷ್ಟದಿಂದ ಯಾ ಕಾಟದಿಂದ) ಸದ್ಯಕ್ಕೆ ಬಿಡುತಿಕೊಡು; ತಾತ್ಕಾಲಿಕ ವಿಮೋಚನೆ ನೀಡು.
See also 1reprieve
2reprieve ರಿಪ್ರೀವ್‍
ನಾಮವಾಚಕ
  1. (ದಂಡನೆಗೆ ಗುರಿಯಾಗಿರುವವನ, ಮುಖ್ಯವಾಗಿ ಮರಣದಂಡನೆಯನ್ನು) ಮುಂದೂಡುವಿಕೆ; ವಿಳಂಬ ಮಾಡುವಿಕೆ; ತಾತ್ಕಾಲಿಕವಾಗಿ ತಡೆದಿರುವಿಕೆ, ನಿಲ್ಲಿಸುವಿಕೆ.
  2. (ದಂಡನೆಗೆ, ಮುಖ್ಯವಾಗಿ ಮರಣದಂಡನೆಗೆ, ಗುರಿಯಾಗಿರುವವನಿಗೆ) ದಂಡನೆಯು ಸದ್ಯಕ್ಕೆ ತಪ್ಪುವಿಕೆ, ಮುಂದೂಡಲ್ಪಡುವಿಕೆ.
    1. ಮರಣದಂಡನೆಯನ್ನು ತಗ್ಗಿಸುವಿಕೆ ಯಾ ಬೇರೆ ದಂಡನೆಯಾಗಿ ಪರಿವರ್ತಿಸುವಿಕೆ.
    2. ಮರಣದಂಡನೆಯನ್ನು ತಗ್ಗಿಸಿದ ಯಾ ಬೇರೆ ದಂಡನೆಯಾಗಿ ಪರಿವರ್ತಿಸಿದ ಆಜ್ಞೆ.
  3. (ಯಾವುದೇ ಕಾಟದಿಂದ ಯಾ ಅನಿಷ್ಟದಿಂದ) ಸದ್ಯಕ್ಕೆ ಬಿಡುತೆ; ತಾತ್ಕಾಲಿಕ ವಿಮೋಚನೆ.