1representative ರೆಪ್ರಿಸೆಂಟಟಿವ್‍
ಗುಣವಾಚಕ
  1. (ಯಾವುದನ್ನೇ) ಪ್ರತೀಕಗೊಳಿಸುವ; (ಯಾವುದೇ ವಿಷಯದ) ಪ್ರತೀಕವಾದ; ಮೂರ್ತಸ್ವರೂಪವಾದ: a group representative of the theological virtues ಧಾರ್ಮಿಕ ಗುಣಗಳ ಪ್ರತೀಕವಾದ ಒಂದು ಸಮುದಾಯ.
  2. ಮನಸ್ಸಿನಲ್ಲಿ ಭಾವನೆಗಳನ್ನು–ಮೂಡಿಸಬಲ್ಲ, ಸೃಷ್ಟಿಸಬಲ್ಲ, ಕಲ್ಪಿಸಬಲ್ಲ: imagination is a representative faculty ಕಲ್ಪನಾಶಕ್ತಿ ಎಂಬುವುದು (ಮನಸ್ಸಿನಲ್ಲಿ) ಭಾವನೆಗಳನ್ನು ಮೂಡಿಸುವ ಶಕ್ತಿ.
  3. (ಒಂದೋ ಹಲವೋ ವರ್ಗದ) ಪ್ರಾತಿನಿಧಿಕ; ಹಲವು ಮಾದರಿ ನಿದರ್ಶನಗಳನ್ನು ಯಾ ಹಲವು ಆದರ್ಶ ಉದಾಹರಣೆಗಳನ್ನು ಒಳಗೊಂಡ; (ಇಡೀ ವರ್ಗವನ್ನು ಯಾ ಎಲ್ಲ ವರ್ಗಗಳನ್ನೂ) ಪ್ರತಿನಿಧಿಸುವ: a meeting representative of all sections ಎಲ್ಲ ವರ್ಗಗಳಿಗೂ ಪ್ರತಿನಿಧಿಯಂತಿರುವ, ನಿದರ್ಶಕವಾದ ಸಭೆ.
  4. ಪ್ರಾತಿನಿಧ್ಯದ:
    1. ಪ್ರತಿನಿಧಿಗಳನ್ನೊಳಗೊಂಡ: representative house ಪ್ರತಿನಿಧಿಗಳನ್ನೊಳಗೊಂಡ ಸಭೆ.
    2. ಪ್ರಾತಿನಿಧ್ಯ ತತ್ತ್ವದ ತಳಹದಿಯುಳ್ಳ: a representative government ಪ್ರಾತಿನಿಧ್ಯದ ಸರ್ಕಾರ.
2representative ರೆಪ್ರಿಸೆಂಟಟಿವ್‍
ನಾಮವಾಚಕ
  1. (ಯಾವುದೇ ಪ್ರಾಣಿಯ ಯಾ ವಸ್ತುವಿನ) ಮಾದರಿ; ನಮೂನೆ; ಉದಾಹರಣೆ; ನಿದರ್ಶನ: a representative of the mammal family ಸಸ್ತನಿ ವರ್ಗದ ಒಂದು ಮಾದರಿ, ನಿದರ್ಶನ.
  2. (ಯಾವುದೇ ವಸ್ತುವಿನ) ತದ್ರೂಪ; ಪಡಿಯಚ್ಚು.
  3. (ಯಾವುದೇ ಕಲ್ಪನೆಯ) ಪ್ರತೀಕ; ಲಾಂಛನ; ಸಂಕೇತ: the flag is the representative of the country ಧ್ವಜವು ರಾಷ್ಟ್ರದ ಪ್ರತೀಕ.
    1. (ಒಬ್ಬನ) ಬದಲಿ ಯಾ ಪ್ರತಿನಿಧಿ ಯಾ ನಿಯೋಗಿ ಯಾ ಏಜೆಂಟು.
    2. (ಒಬ್ಬನ) ವಾರಸುದಾರ; ಉತ್ತರಾಧಿಕಾರಿ.
  4. (ಪಾರ್ಲಿಮೆಂಟು ಮೊದಲಾದ ಶಾಸನಸಭೆಯ ಸದಸ್ಯನಾದ, ಜನತೆಯ) ಪ್ರತಿನಿಧಿ: House of Representatives ಪ್ರತಿನಿಧಿ ಸಭೆ.
  5. ಏಜೆಂಟು; ಪ್ರತಿನಿಧಿ; ವಾಣಿಜ್ಯಸಂಬಂಧವಾಗಿ ಪ್ರವಾಸಮಾಡುವವ.