representationalism ರೆಪ್ರಿಸೆಂಟೇಷನಲಿಸಮ್‍
ನಾಮವಾಚಕ
  1. (ಸಾಹಿತ್ಯ, ಕಲೆಗಳಲ್ಲಿ) ಯಥಾಚಿತ್ರಣ; ವಾಸ್ತವಿಕ ನಿರೂಪಣ; ವಸ್ತುಗಳನ್ನು ನಿಜಜೀವನದಲ್ಲಿ ಅವು ಇರುವಂತೆ ಯಾ ಅವನ್ನು ಗುರುತಿಸಲಾಗುವಂತೆ ಚಿತ್ರಿಸುವ ಪದ್ಧತಿ ಯಾ ಸಿದ್ಧಾಂತ.
  2. (ತತ್ತ್ವಶಾಸ್ತ್ರ) ಪ್ರತೀಕವಾದ; ಇಂದ್ರಿಯಗ್ರಾಹ್ಯವಾದ ವಸ್ತುಗಳು ವಸ್ತುಭೂತವಾದ ಬಾಹ್ಯವಸ್ತುಗಳ ಪ್ರತೀಕ, ಪ್ರತಿಕೃತಿ ಮಾತ್ರ ಎಂಬ ವಾದ; ಇಂದ್ರಿಯಗ್ರಾಹ್ಯವಾದ ಯಾ ಪ್ರತ್ಯಕ್ಷ ಸಂವೇದನೆಯ ವಸ್ತುಗಳು ಬಾಹ್ಯ ವಸ್ತುಗಳನ್ನು ಪ್ರತಿನಿಧಿಸುವ ಭಾವನೆಗಳು, ಕಲ್ಪನೆಗಳು ಯಾ ಸಂವೇದನೆಗಳು ಮಾತ್ರ ಎನ್ನುವ ಸಿದ್ಧಾಂತ; ಜ್ಞಾನಕ್ಕೆ ವಿಷಯವಾಗಿರುವ ವಸ್ತು ಅದರ ಅನುಭವಕ್ಕೆ ಕಾರಣವಾದ ಬಾಹ್ಯವಸ್ತುವಾಗಿರದೆ ಅದಕ್ಕಿಂತ ಭಿನ್ನವಾದ, ಮನಸ್ಸಿನಲ್ಲಿಯ ಅದರ ಪ್ರತೀಕ ಯಾ ಕಲ್ಪನೆ ಎಂಬ ವಾದ.