representation ರೆಪ್ರಿಸೆಂಟೇಷನ್‍
ನಾಮವಾಚಕ
  1. (ಮನಸ್ಸಿಗೆ, ಇಂದ್ರಿಯಗಳಿಗೆ ಯಾ ಕಲ್ಪನೆಗೆ ವಿಶದವಾಗಿ ಕಾಣುವಂತೆ) ಮೂಡಿಸುವುದು; ನಿರೂಪಿಸುವುದು; ನಿರೂಪಣ; ಚಿತ್ರಿಸುವುದು; ಚಿತ್ರಣ.
    1. (ಚಿತ್ರಕಲೆ, ಶಿಲ್ಪಗಳಲ್ಲಿ) ಪ್ರತಿಕೃತಿ; ರಚನೆ; ಚಿತ್ರಣ.
    2. ಪ್ರತಿಕೃತಿ; ಪ್ರತಿರೂಪ; ಪ್ರತಿಮೆ ಯಾ ಚಿತ್ರ.
    3. ಸಂಕೇತ; ಪ್ರತೀಕ.
  2. (ನಾಟಕದ ವಿಷಯದಲ್ಲಿ) ಅಭಿನಯ ಯಾ ಪ್ರದರ್ಶನ.
  3. ಪ್ರಾತಿನಿಧ್ಯ: no taxation without representation ಪ್ರಾತಿನಿಧ್ಯ ನೀಡದೆ ತೆರಿಗೆ ವಿಧಿಸಲಾಗದು; ಪ್ರಾತಿನಿಧ್ಯದ ಹಕ್ಕು ಕೊಡದಿದ್ದರೆ, ತೆರಿಗೆ ಕೊಡುವುದಿಲ್ಲ.
  4. (ಕ್ಷೇತ್ರದ) ಪ್ರತಿನಿಧಿಗಳು.
  5. (ಮುಖ್ಯವಾಗಿ ಬಹುವಚನದಲ್ಲಿ) ಆಪಾದನೆ; ಆರೋಪ; ಆಪಾದನೆ ಮಾಡುವ ಯಾ ಅಭಿಪ್ರಾಯ ತಿಳಿಸುವ ಹೇಳಿಕೆ.
  6. (ವ್ಯಕ್ತಿ, ವರ್ಗ ಮೊದಲಾದವುಗಳ ಪರವಾಗಿ ಪ್ರತಿನಿಧಿ ಮಾಡಿದ)
    1. ಅಹವಾಲು; ಮನವಿ; ಭಾಷಣ.
    2. ಕಾರ್ಯ.
ಪದಗುಚ್ಛ

proportional representation (ಸಮಾಜದ ವರ್ಗಗಳಿಗೆ ಅವರವರ ಸಂಖ್ಯಾನುಗುಣವಾಗಿ ಚುನಾಯಿತರಾಗುವಂತೆ ಕಲ್ಪಿಸಿರುವ) ದಾಮಾಷಾ ಪ್ರಾತಿನಿಧ್ಯ; ಸಂಖ್ಯಾವಾರು ಪ್ರಾತಿನಿಧ್ಯ.