represent ರೆಪ್ರಿಸೆಂಟ್‍
ಸಕರ್ಮಕ ಕ್ರಿಯಾಪದ
  1. (ವರ್ಣನೆ ಯಾ ಚಿತ್ರಣ ಯಾ ಕಲ್ಪನೆಯ ಮೂಲಕ ಮನಸ್ಸಿಗೆ ಯಾ ಇಂದ್ರಿಯಗಳಿಗೆ ಕಾಣುವಂತೆ) ಚಿತ್ರಿಸು; ವರ್ಣಿಸು; ನಿರೂಪಿಸು; ಮೂಡಿಸು; ಬಿಂಬಿಸು: I can represent the concept only in metaphors ರೂಪಕಗಳಲ್ಲಿ ಮಾತ್ರವೇ ಆ ಕಲ್ಪನೆಯನ್ನು ನಾನು ನಿರೂಪಿಸಬಲ್ಲೆ.
  2. (ಮನಸ್ಸಿನಲ್ಲಿ) ಕಲ್ಪಿಸಿಕೊ: can you represent infinity to yourself? ಅನಂತತ್ವವನ್ನು ನಿನ್ನಲ್ಲಿ ನೀನು ಕಲ್ಪಿಸಿಕೊಳ್ಳಬಲ್ಲೆಯಾ?
  3. (ಒಬ್ಬನಿಗೆ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಲು ಸಾಧಕವಾದ ಸಂಗತಿಯನ್ನು ಯಾ ನಿಜಸ್ಥಿತಿಯನ್ನು)
    1. ಅರಿಕೆ ಮಾಡು; ತಿಳಿಯಹೇಳು; ಅರಿವುಮಾಡಿಕೊಡು: I represented to him the rashness of his conduct ಅವನ ನಡೆವಳಿಕೆ ಎಷ್ಟು ದುಡುಕಾದುದೆಂಬುದನ್ನು ಅವನಿಗೆ ಅರಿವು ಮಾಡಿಕೊಟ್ಟೆ.
    2. ಮನವರಿಕೆ ಮಾಡಿಕೊಡು; ಮನದಟ್ಟುಮಾಡಿಕೊಡು: represented the risks to the patient ರೋಗಿಗೆ ಅಪಾಯದ ಮನವರಿಕೆ ಮಾಡಿಕೊಟ್ಟೆ.
  4. (ಅಂತೆ, ಹಾಗೆ) ವರ್ಣಿಸು; ನಿರೂಪಿಸು; ಚಿತ್ರಿಸು: the picture represents the Pope as a beggar ಆ ಚಿತ್ರವು ಪೋಪನನ್ನು ತಿರುಕನಂತೆ ಚಿತ್ರಿಸುತ್ತದೆ.
  5. (ಎಂದು) ಹೇಳು; ಸಾರು; ಘೋಷಿಸು; ಪ್ರತಿಪಾದಿಸು; ಪ್ರಕಟಿಸು; ತೋರಿಸು: represent as martyrs ಹುತಾತ್ಮರೆಂದು ಪ್ರಕಟಿಸು. he represents himself as having seen long service ತಾನು ದೀರ್ಘಕಾಲ ಸೇವೆ ಸಲ್ಲಿಸಿ ಅನುಭವ ಪಡೆದಿರುವುದಾಗಿ ಅವನು ತೋರಿಸಿಕೊಂಡ, ಹೇಳಿಕೊಂಡ. not as you represent it to be ಅದು ನೀನು ಹೇಳುವಂತೆ ಇಲ್ಲ.
  6. (ನಾಟಕ ಯಾ ಪಾತ್ರವನ್ನು) ಅಭಿನಯಿಸು; ಪ್ರದರ್ಶಿಸು.
  7. (ಒಂದರ) ಸಂಕೇತವಾಗಿರು; ಪ್ರತೀಕವಾಗಿರು; ಪ್ರತಿಕೃತಿಯಾಗಿರು: the sovereign represents the majesty of the State ರಾಜನು ರಾಷ್ಟ್ರದ ಘನತೆಯ ಪ್ರತೀಕ. the circle represents perfection ವೃತ್ತವು ಪರಿಪೂರ್ಣತೆಯನ್ನು ಸಂಕೇತಿಸುತ್ತದೆ.
  8. (ಒಂದಕ್ಕೆ) ಸರಿಸಮನಾಗಿರು; ಸರಿಸಮನಾದ ಪ್ರಮಾಣದಲ್ಲಿರು; ಅನುಗುಣವಾದ ಪ್ರಮಾಣದಲ್ಲಿರು: an inch of rain represents 100 tons to the acre ಒಂದು ಅಂಗುಲ ಮಳೆ ಎಕರೆಗೆ 100 ಟನ್ನಿಗೆ ಸರಿಸಮವಾಗುತ್ತದೆ.
  9. (ಒಂದಕ್ಕೆ) ಸದೃಶವಾಗಿರು; ಸಮಾನವಾಗಿರು; ಸಂವಾದಿಯಾಗಿರು: Ilamas represent camels in America ಲಾಮಾ (ಎಂಬ ಪ್ರಾಣಿ)ಗಳು ಅಮೆರಿಕ ಖಂಡದಲ್ಲಿ ಒಂಟೆಗಳಿಗೆ ಸಂವಾದಿಯಾಗಿವೆ.
  10. (ಅನೇಕವೇಳೆ ಕರ್ಮಣಿಪ್ರಯೋಗ) (ಒಂದರ) ದೃಷ್ಟಾಂತ, ನಿದರ್ಶನ ಯಾ ಮಾದರಿ–ಆಗಿರು; (ಒಂದನ್ನು) ನಿದರ್ಶಿಸು: all types of people were represented in the audience ಶ್ರೋತೃಗಳಲ್ಲಿ ಎಲ್ಲ ಬಗೆಯ ಜನಗಳನ್ನು ನಿದರ್ಶಿಸುವವರು ಇದ್ದರು.
  11. ಪ್ರತಿನಿಧಿಸು ಯಾ ಅನುಗುಣವಾಗಿರು, ಅನುರೂಪವಾಗಿರು: the comment does not represent our view ಟೀಕೆ ನಮ್ಮ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ, ಅಭಿಪ್ರಾಯಕ್ಕೆ ಅನುಗುಣವಾಗಿಲ್ಲ.
  12. ಪ್ರತಿನಿಧಿಸು; ಪ್ರತಿನಿಧಿಯಾಗಿರು; ಕ್ಷೇತ್ರದಿಂದ ಪಾರ್ಲಿಮೆಂಟು ಮೊದಲಾದವುಗಳಿಗೆ ಚುನಾಯಿತನಾಗು: represents a reserve constituency ಅವನು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಾನೆ.
  13. (ವ್ಯಕ್ತಿಯ ಯಾ ಸಂಸ್ಥೆಯ) ಬದಲಿಯಾಗಿರು; ಪ್ರತಿನಿಧಿಯಾಗಿ ಯಾ ನಿಯೋಗಿಯಾಗಿ ವರ್ತಿಸು: the ambassador represented the king ರಾಯಭಾರಿ ರಾಜನಿಗೆ ಪ್ರತಿನಿಧಿಯಾಗಿ ಯಾ ನಿಯೋಗಿಯಾಗಿ ವರ್ತಿಸಿದ.
  14. (ಒಂದರ) ಪಡಿಯಚ್ಚಾಗಿರು; ಪ್ರತಿಬಿಂಬವೆನಿಸುವಂತಿರು.
  15. ಆಪಾದಿಸು; ಆರೋಪಿಸು: he represented that I was a dogmatic person ನಾನೊಬ್ಬ ಮೊಂಡು ಬುದ್ಧಿಯವನೆಂದು ಅವನು ಆಪಾದಿಸಿದ.
  16. ಅಭಿಪ್ರಾಯದ ಯಾ ತೀರ್ಮಾನದ ಯಾ ಕಾರ್ಯದ ಮೇಲೆ ಪರಿಣಾಮ ಬೀರುವಂತೆ–ಹೇಳು, ಮಂಡಿಸು, ನಿರೂಪಿಸು, ಪ್ರತಿಪಾದಿಸು.
  17. ಫಲವಾಗಿರು; ಪರಿಣಾಮವಾಗಿರು: the new car represents years of research ಹೊಸ ಕಾರು ಅನೇಕ ವರ್ಷಗಳ ಸಂಶೋಧನೆಯ ಫಲವಾಗಿದೆ.
  18. ಪ್ರತಿಭಟನೆಯಾಗಿ ಯಾ ಅಹವಾಲಾಗಿ ಯಾ ಮನವಿಯಾಗಿ–ಹೇಳು, ತಿಳಿಸು: represent the seriousness of the accusation ಆಪಾದನೆಯ ಗಂಭೀರ ಸ್ವರೂಪವನ್ನು ತಿಳಿಸು. represent one’s grievances ತನ್ನ ತೊಂದರೆಗಳನ್ನು ತಿಳಿಸು.