See also 2repose  3repose
1repose ರಿಪೋಸ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಲ್ಲಿ, ಒಂದರಲ್ಲಿ ನಂಬಿಕೆ ಮೊದಲಾದವನ್ನು) ಇರಿಸು; ಇಡು.
  2. (ವಸ್ತು, ಸಂಸ್ಥೆ ಮೊದಲಾದವನ್ನು) ವ್ಯಕ್ತಿಯ ವಶದಲ್ಲಿ, ಸ್ವಾಧೀನದಲ್ಲಿ–ಇಡು.
  3. (ಪ್ರಾಚೀನ ಪ್ರಯೋಗ) ನಿಕ್ಷೇಪಿಸು; ಠೇವಣಿ, ನಿಧಿ ಮೊದಲಾದವನ್ನು ಸುರಕ್ಷಿತವಾಗಿ ಇಡು.
See also 1repose  3repose
2repose ರಿಪೋಸ್‍
ನಾಮವಾಚಕ
  1. ವಿಶ್ರಾಂತಿ; ವಿರಾಮ; ಆರಾಮ; ಕೆಲಸದಿಂದ ಯಾ ಸಡಗರ ಸಂಭ್ರಮದಿಂದ ಯಾ ದುಡಿಮೆಯಿಂದ ಬಿಡುವು.
  2. ನಿದ್ರೆ: a night’s repose ಒಂದು ರಾತ್ರಿಯ ನಿದ್ರೆ.
  3. ಪ್ರಶಾಂತತೆ ಯಾ ಶಾಂತಿ; ಸುತ್ತಮುತ್ತಲ ಪ್ರಶಾಂತ ಸ್ಥಿತಿ ಯಾ ಮನಸ್ಸಿನ ಶಾಂತತೆ, ಸಮಾಧಾನ.
  4. (ಕಲೆಗಳಲ್ಲಿ)
    1. (ವ್ಯಕ್ತಿ–ಚಿತ್ರಣದಲ್ಲಿ) ಪ್ರಶಾಂತಮುದ್ರೆ.
    2. (ಪ್ರಕೃತಿ ಚಿತ್ರಣದಲ್ಲಿ) ಪ್ರಶಾಂತತೆಯ ಭಾವ; ಚಿತ್ರಣದ ನೆಲೆಯಲ್ಲಿ ಪ್ರಶಾಂತತೆಯಿರುವಂತೆ ನೋಡುವವರ ಮನಸ್ಸಿನ ಮೇಲಾಗುವ ಪರಿಣಾಮ.
  5. ಸಮಚಿತ್ತತೆ; ಚಿತ್ತಸ್ವಾಸ್ಥ್ಯ; ಮನಸ್ಸಮಾಧಾನ: he lacks repose ಅವನಿಗೆ ಸಮಚಿತ್ತತೆ ಇಲ್ಲ.
See also 1repose  2repose
3repose ರಿಪೋಸ್‍
ಸಕರ್ಮಕ ಕ್ರಿಯಾಪದ
  1. (ತನ್ನ ತಲೆ ಮೊದಲಾದವನ್ನು ದಿಂಬು ಮೊದಲಾದವುಗಳ ಮೇಲೆ) ವಿಶ್ರಾಂತಿಗಾಗಿ ಇಡು.
  2. ವಿಶ್ರಾಂತಿಯಿಂದ ಆಯಾಸವನ್ನು ಪರಿಹಾರ ಮಾಡು, ಮಾಡಿಕೊ.
ಅಕರ್ಮಕ ಕ್ರಿಯಾಪದ
  1. ವಿಶ್ರಾಂತಿ ತೆಗೆದುಕೊ; ವಿಶ್ರಾಂತಿಗಾಗಿ ಮಲಗಿಕೊ: reposed on a sofa ಸೋಫಾದ ಮೇಲೆ ವಿಶ್ರಾಂತಿ ತೆಗೆದುಕೊಂಡ.
  2. (ಮುಖ್ಯವಾಗಿ ನಿದ್ದೆಯಲ್ಲಿ ಯಾ ಸತ್ತು) ಮಲಗು ಯಾ ಮಲಗಿರು.
  3. (–ರ ಮೇಲೆ) ಒರಗಿರು; ಅವಲಂಬಿಸಿರು; ಆಧಾರ ಹೊಂದಿರು.
  4. (ನೆನಪು ಮೊದಲಾದವುಗಳ ವಿಷಯದಲ್ಲಿ) ಚಿಂತಿಸು; ಆಲೋಚಿಸು.