replace ರಿಪ್ಲೇಸ್‍
ಸಕರ್ಮಕ ಕ್ರಿಯಾಪದ
  1. ಮುಂಚಿನ ಸ್ಥಾನದಲ್ಲೇ ಇಡು; (ವಸ್ತುವನ್ನು) ಅದರ ಜಾಗದಲ್ಲೇ ಮತ್ತೆ ಇಡು.
  2. (ಬೇರೊಬ್ಬನ, ಬೇರೊಂದರ) ಸ್ಥಾನ ತೆಗೆದುಕೊ, ಆಕ್ರಮಿಸು; (ಬೇರೊಬ್ಬನ, ಬೇರೊಂದರ) ಬದಲಾಗಿ ಬರು ಯಾ ತರು.
  3. (ಒಬ್ಬನ ಯಾ ಒಂದರ) ಸ್ಥಳವನ್ನು (ಬೇರೊಬ್ಬನಿಂದ ಯಾ ಬೇರೊಂದರಿಂದ) ತುಂಬು, ಭರ್ತಿಮಾಡು; (ಒಬ್ಬನ ಯಾ ಒಂದರ) ಸ್ಥಾನಕ್ಕೆ (ಬೇರೊಬ್ಬನನ್ನು ಯಾ ಬೇರೊಂದನ್ನು) ಪ್ರತಿನಿಧಿಯಾಗಿ ಹಾಕು, ಬದಲಾಗಿ ಹಾಕು.

be replaced by (ಬೇರೊಬ್ಬನಿಂದ, ಬೇರೊಂದರಿಂದ) ತನ್ನ ಸ್ಥಾನ ಆಕ್ರಮಿತವಾಗು; ತನ್ನ ಜಾಗದಲ್ಲಿ (ಬೇರೊಬ್ಬ, ಬೇರೊಂದು) ಬರು.