See also 2repent
1repent ರೀಪಂಟ್‍
ಗುಣವಾಚಕ

(ಸಸ್ಯವಿಜ್ಞಾನ) ಸರ್ಪಿ; ತೆವಳುವ; ಸರೀಸೃಪವಾದ; ನೆಲದ ಮೇಲೆ ಯಾ ಮೇಲ್ಮೈ ಕೆಳಗೆ ಹಬ್ಬುವ.

See also 1repent
2repent ರಿಪೆಂಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಆತ್ಮಾರ್ಥಕ) ಮರುಗು; ಪಶ್ಚಾತ್ತಾಪಪಡು; ವ್ಯಸನಪಡು; ಶೋಕಿಸು; ವಿಷಾದಿಸು: I now repent me of my doings ನನ್ನ ಕೃತ್ಯಗಳಿಗಾಗಿ ನಾನು ಈಗ ಮರುಗುತ್ತಿದ್ದೇನೆ.
  2. (ಪ್ರಾಚೀನ ಪ್ರಯೋಗಪುರುಷವಾಚಕ ಅರ್ಥವಿಲ್ಲದೆ) ವಿಷಾದಪಡಿಸು; ಪಶ್ಚಾತ್ತಾಪವುಂಟುಮಾಡು: it now repents me that I did that ನಾನು ಅದನ್ನು ಮಾಡಿದೆನಲ್ಲ ಎಂಬುದು ನನ್ನನ್ನು ವಿಷಾದಪಡಿಸುತ್ತಿದೆ.
  3. (ತಪ್ಪು, ಲೋಪ ಮೊದಲಾದವುಗಳಿಗಾಗಿ) ವಿಷಾದಪಡು; ವಿಷಾದಿಸು; ಮರುಗು; ಪಶ್ಚಾತ್ತಾಪಡು: I have nothing to repent of ನಾನು ಯಾವುದಕ್ಕೇ ಆಗಲಿ ಪಶ್ಚಾತ್ತಾಪ ಪಡಬೇಕಾಗಿಲ್ಲ. I repented my kindness ನನ್ನ ದಯೆಗಾಗಿ ನಾನೇ ವಿಷಾದಪಟ್ಟೆ.
  4. (ತಪ್ಪು, ಕೆಟ್ಟದ್ದು ಮೊದಲಾದವನ್ನು) ಮಾಡದಿರುವಂತೆ, ಮುಂದುವರೆಸದಿರುವಂತೆ ನಿರ್ಧರಿಸು, ತೀರ್ಮಾನಿಸು.
ಅಕರ್ಮಕ ಕ್ರಿಯಾಪದ

ಪಶ್ಚಾತ್ತಾಪಪಡು; ವಿಷಾದಿಸು; ಮರುಗು.