repel ರಿಪೆಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ repelled; ವರ್ತಮಾನ ಕೃದಂತ repelling).
  1. (ದಾಳಿಕಾರ; ಆಕ್ರಮಣಕಾರ ಯಾ ದಾಳಿ, ಆಕ್ರಮಣ ಮೊದಲಾದವನ್ನು) ಹಿಂದಕ್ಕೆ ಅಟ್ಟು; ಹಿಮ್ಮೆಟ್ಟಿಸು; ಹಿಂದಕ್ಕೆ ಓಡಿಸು; ನಿವಾರಿಸು: to repel an assailant ಆಕ್ರಮಣಕಾರನನ್ನು ಹಿಮ್ಮೆಟ್ಟಿಸು. to repel an attack ದಾಳಿಯನ್ನು ನಿವಾರಿಸು.
  2. (ಏಟು, ಎದುರಾಳಿಯ ಶಸ್ತ್ರ ಮೊದಲಾದವನ್ನು) ತಡೆ; ನಿರೋಧಿಸು: repel the blow (ಎದುರಾಳಿಯ) ಏಟನ್ನು ತಡೆ. repel the opponent’s sword ಎದುರಾಳಿಯ ಖಡ್ಗವನ್ನು ತಡೆ.
  3. (ವ್ಯಾಮೋಹ ಮೊದಲಾದವಕ್ಕೆ) ಎಡೆಗೊಡದಿರು; ಆಸ್ಪದಗೊಡದಿರು: repel a temptation ವ್ಯಾಮೋಹಕ್ಕೆ ಎಡೆಗೊಡದಿರು.
    1. (ಸಲಹೆ, ವಾದ, ಮನವಿ ಮೊದಲಾದವನ್ನು) ಅಂಗೀಕರಿಸದಿರು; ನಿರಾಕರಿಸು; ತೆಗೆದುಕೊಳ್ಳದೆ ಹೋಗು.
    2. (ಸಲಹೆ, ವಾದ, ಮನವಿ ಮೊದಲಾದವಕ್ಕೆ) ಕಿವಿಗೊಡದಿರು; ಲಕ್ಷ್ಯಕೊಡದೆ ಹೋಗು.
  4. (ಯಾರೇ ಕೊಡಲು ಬರುವ ವಸ್ತು, ಬೆಲೆ, ಸ್ನೇಹ, ಒಲವು ಮೊದಲಾದವನ್ನು) ನಿರಾಕರಿಸು; ತಿರಸ್ಕರಿಸು.
  5. (ಯಾರನ್ನೇ) ಹತ್ತಿರ ಬರಗೊಡದಿರು; ಸುಳಿಯಗೊಡದಿರು.
  6. (ಮುಖ್ಯವಾಗಿ ಅಯಸ್ಕಾಂತಗಳ ವಿಷಯದಲ್ಲಿ) ವಿಕರ್ಷಿಸು; ದೂಡಿಬಿಡು.
  7. ಜುಗುಪ್ಸೆ ಹುಟ್ಟಿಸು; ಅಸಹ್ಯವಾಗುವಂತೆ ವರ್ತಿಸು; ಹೇವರಿಕೆ ಉಂಟುಮಾಡು.