repeater ರಿಪೀಟರ್‍
ನಾಮವಾಚಕ
  1. ಆವರ್ತಕ; ಪುನರಾವರ್ತಕ:
    1. ಮತ್ತೆ ಹೇಳುವ, ಬರುವ, ಮಾಡುವ–ವಸ್ತು ಯಾ ವ್ಯಕ್ತಿ.
    2. ಮತ್ತೆಮತ್ತೆ ಬಾರುಮಾಡದೆ ಹಲವು ಬಾರಿ ಗುಂಡು ಹೊಡೆಯುವ ಬಂದೂಕು ಮೊದಲಾದದ್ದು.
    3. (ಕಾಲುಗಂಟೆ, ಅರ್ಧಗಂಟೆ ಮೊದಲಾದವನ್ನು) ಹೊಡೆಯುವ ಗಡಿಯಾರ.
    4. ವಿದ್ಯುತ್ತಿನ ನೆರವಿನಿಂದ ಕಳುಹಿಸಿದ ಸಂದೇಶಗಳನ್ನು ಹಾಗೆಯೇ ಯಾ ವರ್ಧಿಸಿ ಪುನಃ ರವಾನಿಸುವ ಸಾಧನ.
  2. ಸೂಚಕದೀಪ; ವೀಕ್ಷಕನಿಗೆ ಕಾಣಿಸದಿರುವ ಸಂಕೇತದೀಪವೊಂದರ ಸ್ಥಿತಿಯನ್ನು ವೀಕ್ಷಕನಿಗೆ ಸೂಚಿಸುವ, ತಿಳಿಸುವ ಸಂಕೇತದೀಪ.