repay ರೀಪೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ repaid).
  1. (ಹಣ, ಸಾಲ ಮೊದಲಾದವನ್ನು) ಹಿಂದಿರುಗಿಸು; ಹಿಂದಕ್ಕೆ ಕೊಡು; ವಾಪಸು ಮಾಡು; ಹಿಂದಕ್ಕೆ–ಪಾವತಿ ಮಾಡು, ಸಲ್ಲಿಸು.
  2. (ಏಟು, ಭೇಟಿ, ಉಪಕಾರ ಮೊದಲಾದವನ್ನು) ಪ್ರತಿಯಾಗಿ ಕೊಡು; ಹಿಂದಿರುಗಿಸು; ಬದಲಾಗಿ ಕೊಡು.
  3. ಪ್ರತಿಫಲವಾಗಿ ಯಾ ಪರಿಹಾರವಾಗಿ ಕೊಡು: repay a person for his work ಒಬ್ಬನಿಗೆ ಅವನ ಕೆಲಸಕ್ಕೆ ಪ್ರತಿಫಲ ಕೊಡು.
  4. (ವ್ಯಕ್ತಿಗೆ ಅವನ ಕೆಲಸದ ಯಾ ಅವನಿಗಾದ ನಷ್ಟದ) ಪ್ರತಿಫಲವನ್ನು ಯಾ ಪರಿಹಾರವನ್ನು–ಕೊಡು.
  5. (ಕೆಲಸಕ್ಕೆ ತಕ್ಕ) ಪ್ರತಿಫಲ ಕೊಡು.
ಅಕರ್ಮಕ ಕ್ರಿಯಾಪದ

(ಸಾಲ ಮೊದಲಾದಕ್ಕಾಗಿ ಕೊಟ್ಟದ್ದನ್ನು) ಹಿಂದಿರುಗಿಸು; ವಾಪಸುಮಾಡು; ಹಿಂದಕ್ಕೆ ಕೊಡು; ಸಾಲ ಯಾ ಮುಯ್ಯಿ ತೀರಿಸು.