See also 2repair  3repair  4repair
1repair ರಿಪೇರ್‍
ಅಕರ್ಮಕ ಕ್ರಿಯಾಪದ

(ಒಂದು ಸ್ಥಳಕ್ಕೆ, ಮುಖ್ಯವಾಗಿ ಮತ್ತೆಮತ್ತೆ, ಕೆಲವೊಮ್ಮೆ ಭಾರಿ ಸಂಖ್ಯೆಯಲ್ಲಿ ಯಾ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ) ಹೋಗು; ಹೋಗುತ್ತಿರು; (ಒಂದು ಸ್ಥಳವನ್ನು) ಆಶ್ರಯಿಸು.

See also 1repair  3repair  4repair
2repair ರಿಪೇರ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಹೋಗುವ, ಹೋಗಿಬರುವ–ಸ್ಥಳ; ಆಶ್ರಯ; ವಿಹಾರಧಾಮ: have repair to ವಿಹಾರಧಾಮವನ್ನಾಗಿ ಹೊಂದಿರು.
  2. (ಭಾರಿ ಸಂಖ್ಯೆಯಲ್ಲಿ) ಜನರು ಹೋಗಿಬರುವ ಸ್ಥಳ; ಜನರು ಪದೇಪದೇ ನೆರೆಯುವ ಜಾಗ: a place of great repair ಜನರ ಭಾರಿ ಬೀಡು; ದೊಡ್ಡ ಸಂಖ್ಯೆಯಲ್ಲಿ ನೆರೆಯುವ ಸ್ಥಳ.
See also 1repair  2repair  4repair
3repair ರಿಪೇರ್‍
ಸಕರ್ಮಕ ಕ್ರಿಯಾಪದ
  1. (ಮನೆ, ಯಂತ್ರ, ಉಡುಪು, ಅಂಗಾಂಶ, ದೇಹಬಲ ಮೊದಲಾದವುಗಳನ್ನು) ರಿಪೇರಿಮಾಡು; ಸರಿಪಡಿಸು; ನೇರ್ಪಡಿಸು; ದುರಸ್ತುಮಾಡು; ಮತ್ತೆ ಸುಭದ್ರಸ್ಥಿತಿಗೆ ತರು.
  2. (ದೇವಸ್ಥಾನ ಮೊದಲಾದ ಭವ್ಯವಾದ ಮಂದಿರಗಳ ವಿಷಯದಲ್ಲಿ) ಜೀರ್ಣೋದ್ಧಾರಮಾಡು; ಪೂರ್ವಸ್ಥಿತಿಗೆ ತರು.
  3. (ತಪ್ಪು, ನಷ್ಟ, ಅನ್ಯಾಯ ಮೊದಲಾದವನ್ನು) ಸರಿಪಡಿಸು; ಪರಿಹರಿಸು.
See also 1repair  2repair  3repair
4repair ರಿಪೇರ್‍
ನಾಮವಾಚಕ
  1. ನೇರ್ಪಾಟು; ದುರಸ್ತು; ರಿಪೇರಿ: the bicycle needs repair ಬೈಸಿಕಲ್ಲಿಗೆ ರಿಪೇರಿ ಬೇಕಾಗಿದೆ. health needs repair ಆರೋಗ್ಯವನ್ನು ಸರಿಪಡಿಸಬೇಕಾಗಿದೆ, ಸುಧಾರಿಸಬೇಕಾಗಿದೆ. shop closed for repairs ರಿಪೇರಿಗಾಗಿ ಅಂಗಡಿ ಮುಚ್ಚಿದೆ.
  2. ರಿಪೇರಿಯಾಗಿರುವ ಸ್ಥಿತಿ; ರಿಪೇರಿ ಕೆಲಸದ ಪರಿಣಾಮ: the repair is hardly visible ರಿಪೇರಿ(ಯಾಗಿರುವುದು) ಕಾಣಿಸುವುದೇ ಇಲ್ಲ.
  3. (ಬಳಸಲು ಯಾ ಕೆಲಸಮಾಡಲು ಅನುಕೂಲವಾದ) ಸುಸ್ಥಿತಿ; ಉತ್ತಮ ಸ್ಥಿತಿ: the house is in good repair ಮನೆ ಸುಸ್ಥಿತಿಯಲ್ಲಿದೆ. friendship must be kept in good repair ಗೆಳೆತನವನ್ನು ಉತ್ತಮ ಸ್ಥಿತಿಯಲ್ಲಿರುವಂತೆ ಇಟ್ಟುಕೊಳ್ಳಬೇಕು.