renounce ರಿನೌನ್ಸ್‍
ಸಕರ್ಮಕ ಕ್ರಿಯಾಪದ
  1. (ಹಕ್ಕು, ಅಧಿಕಾರ, ಸುಪರ್ದಿನಲ್ಲಿರುವ ಸ್ವತ್ತಿನ ಅನುಭೋಗ ಮೊದಲಾದವನ್ನು) ವಿಧಿವತ್ತಾಗಿ ಬಿಟ್ಟುಕೊಡು, ತ್ಯಜಿಸು.
  2. (ಸಂಬಂಧವನ್ನು) ತೊರೆ; ಕಡಿದುಹಾಕು; ತ್ಯಜಿಸು; ಪರಿತ್ಯಾಗಮಾಡು: renounce family ಕುಟುಂಬದ ಸಂಬಂಧವನ್ನು ಕಡಿದುಹಾಕಿಕೊ.
  3. (ಮಾನ್ಯಮಾಡಲು, ಗೌರವಿಸಲು) ನಿರಾಕರಿಸು: renounce treaty ಒಪ್ಪಂದವನ್ನು ನಿರಾಕರಿಸು. renounce a person’s authority ಒಬ್ಬನ ಅಧಿಕಾರವನ್ನು ಮಾನ್ಯಮಾಡಲು ನಿರಾಕರಿಸು.
ಅಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ಯಾವುದೇ ಹಕ್ಕು, ಅಧಿಕಾರ ಮೊದಲಾದವನ್ನು, ಮುಖ್ಯವಾಗಿ ವಾರಸು, ಧರ್ಮದರ್ಶಿತ್ವ ಮೊದಲಾದವನ್ನು) ಅಂಗೀಕರಿಸದಿರು; ನಿರಾಕರಿಸು.
  2. (ಹಕ್ಕು, ಅಧಿಕಾರ ಮೊದಲಾದವಕ್ಕೆ) ರಾಜೀನಾಮೆ ಕೊಡು.
  3. (ಇಸ್ಪೀಟು) ಇಳಿಸಿರುವ ರಂಗಿನ ಎಲೆ ಕೈಯಲ್ಲಿಲ್ಲದಿದ್ದಾಗ ಬೇರೆ ರಂಗನ್ನು ಇಳಿ.
ಪದಗುಚ್ಛ

renounce the world ಪ್ರಪಂಚವನ್ನು ತೊರೆ; ಸಮಾಜವನ್ನು ಯಾ ಐಹಿಕ ವ್ಯವಹಾರಗಳನ್ನು ಪರಿತ್ಯಜಿಸು.