rendition ರೆಂಡಿಷನ್‍
ನಾಮವಾಚಕ
  1. (ವಿರಳ ಪ್ರಯೋಗ) (ಸ್ಥಳ, ಪ್ರದೇಶ, ಅಧಿಕಾರ ಯಾ ವ್ಯಕ್ತಿಯನ್ನು ವಿಜೇತರಿಗೆ) ಒಪ್ಪಿಸುವುದು; ಅರ್ಪಣ.
  2. ಚಿತ್ರಣ; ಪ್ರದರ್ಶನ; ಚಾಕ್ಷುಷ ನಿರೂಪಣ, ಅಭಿವ್ಯಕ್ತಿ.
    1. (ಕವಿತೆ ಮೊದಲಾದವುಗಳ) ಭಾವವ್ಯಂಜನ; ಭಾವವ್ಯಾಖ್ಯಾನ; ಅರ್ಥಭಾವಗಳ ನಿರೂಪಣ, ಕಥನ, ಪ್ರವಚನ.
    2. (ನಾಟಕದ) ಪಾತ್ರಾಭಿನಯ; ಪಾತ್ರ ಸ್ವರೂಪವನ್ನು ಅಭಿನಯದಿಂದ ಪ್ರದರ್ಶಿಸುವುದು.
    3. (ನೃತ್ಯದ ಭಾಗವೊಂದರ) ಪ್ರದರ್ಶನ.
    4. (ಸಂಗೀತಕೃತಿಯ) ವಾದನ ಯಾ ಗಾಯನ.