See also 2rendezvous
1rendezvous ರಾಂಡಿ(ಡೇ)ವೂ
ನಾಮವಾಚಕ
[ಬಹುವಚನ ಅದೇ; ಉಚ್ಚಾರಣೆ ರಾಂಡಿ(ಡೇ)ವೂಸ್‍].
  1. (ಪಡೆಗಳು ಯಾ ಹಡಗುಗಳು ಒಟ್ಟಾಗಿ ಸೇರಲು ಏರ್ಪಡಿಸಿದ) ಜಮಾವಣೆ ಜಾಗ; ಕೂಡುವೆಡೆ; ಸಂಗಮಸ್ಥಾನ; ಕೂಡುದಾಣ.
  2. (ಜನರೆಲ್ಲ ಸಾಮಾನ್ಯವಾಗಿ) ಸೇರುವ ಸ್ಥಳ; ಕೂಡುತಾಣ.
  3. (ಪರಸ್ಪರ ಮಾತನಾಡಿಕೊಂಡು ಗೊತ್ತುಮಾಡಿಕೊಂಡ) ಗುಪ್ತ ಸ್ಥಳ; ಸಂಕೇತಸ್ಥಳ; ರಹಸ್ಯಸ್ಥಾನ.
  4. (ಸಂಕೇತ ಸ್ಥಳದಲ್ಲಿ ಮೊದಲೇ) ಗೊತ್ತು ಮಾಡಿಕೊಂಡಿದ್ದಂತೆ ಸೇರುವುದು ಯಾ ಹಾಗೆ ಸೇರಿದ ಕೂಟ.
See also 1rendezvous
2rendezvous ರಾಂಡಿ(ಡೇ)ವೂ
ಅಕರ್ಮಕ ಕ್ರಿಯಾಪದ
[ವರ್ತಮಾನ ಪ್ರಥಮ ಪುರುಷ ಏಕವಚನ rendezvouses ಉಚ್ಚಾರಣೆ ರಾಂಡಿ(ಡೇ)ವೂಸ್‍; ಭೂತರೂಪ ಮತ್ತು ಭೂತಕೃದಂತ rendezvoused ಉಚ್ಚಾರಣೆ ರಾಂಡಿ(ಡೇ)ವೂಡ್‍; ವರ್ತಮಾನ ಕೃದಂತ rendezvousing ಉಚ್ಚಾರಣೆ ರಾಂಡಿ(ಡೇ)ವೂಇಂಗ್‍].

ಗೊತ್ತು ಮಾಡಿಕೊಂಡ ರಹಸ್ಯಸ್ಥಾನದಲ್ಲಿ ಸೇರು, ಸಂಧಿಸು, ಭೇಟಿಯಾಗು.