renderer ರೆಂಡರರ್‍
ನಾಮವಾಚಕ
  1. ಪ್ರತಿಯಾಗಿ ಕೊಡುವವ, ಮಾಡುವವ.
  2. (ಸಹಾಯ) ನೀಡುವವ.
  3. (ಕಪ್ಪಕಾಣಿಕೆಗಳನ್ನು) ಒಪ್ಪಿಸುವವ.
  4. (ವಿಧೇಯತೆ ಮೊದಲಾದವನ್ನು) ತೋರಿಸುವವ.
  5. (ಲೆಕ್ಕಾಚಾರ, ವಿವರಣೆ ಮೊದಲಾದವನ್ನು) ಒಪ್ಪಿಸುವವ.
  6. (ಚಿತ್ರಣ, ಶಿಲ್ಪಗಳಲ್ಲಿ ಮುಖಭಾವ ಮೊದಲಾದವನ್ನು) ಮೂಡಿಸುವವ.
  7. (ಕಾವ್ಯ ಮೊದಲಾದವುಗಳಲ್ಲಿ ಭಾವ ಮೊದಲಾದವನ್ನು) ಅಭಿವ್ಯಕ್ತಿಗೊಳಿಸುವವ.
  8. ಅನುವಾದಿಸುವವ.