rend ರೆಂಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rent ಉಚ್ಚಾರಣೆ ರೆಂಟ್‍).
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಯಾ ಅಲಂಕಾರಶಾಸ್ತ್ರ) ಬಲವಂತವಾಗಿ ಹರಿದುಹಾಕು ಯಾ ಕಿತ್ತು ಹಾಕು.
  2. ಸೀಳು; ಭಾಗಗಳಾಗಿ ಯಾ ಪಕ್ಷಗಳಾಗಿ ಒಡೆ ( ಅಕರ್ಮಕ ಕ್ರಿಯಾಪದ ಸಹ): a country rent by civil war ಅಂತರ್ಯುದ್ಧದಿಂದ ಒಡೆದುಹೋದ ದೇಶ.
  3. (ರೂಪಕವಾಗಿ) ಒಡೆ; ಭೇದಿಸು; ಸೀಳು: shouts rent the air ಆ ಕೂಗಾಟ ಆಕಾಶವನ್ನು ಭೇದಿಸು. heart rent by contending emotions ಭಾವಗಳ ತುಮುಲದಿಂದ ಸೀಳುಸೀಳಾದ ಹೃದಯ, ಒಡೆದ ಎದೆ.
ಪದಗುಚ್ಛ
  1. rend one’s garments (or hair)
    1. ಕೋಪದಿಂದ ಯಾ ದುಃಖದಿಂದ ತನ್ನ ಬಟ್ಟೆಬರೆ ಹರಿದು ಹಾಕು (ಯಾ ಕೂದಲು ಕಿತ್ತುಕೊ).
    2. ತೀವ್ರ ದುಃಖ ಯಾ ಕೋಪವನ್ನು ಪ್ರದರ್ಶಿಸು.
  2. rend the air ಆಕಾಶ ಭೇದಿಸುವಂತೆ ಶಬ್ದಮಾಡು; ಆಕಾಶ ಸೀಳುವಂತೆ ಆರ್ಭಟಿಸು, ಕೂಗು.