remotely ರಿಮೋಟ್‍ಲಿ
ಕ್ರಿಯಾವಿಶೇಷಣ
  1. ದೂರವಾಗಿ; (ಕಾಲ, ದೇಶ, ನಂಟತನ ಮೊದಲಾದವುಗಳಲ್ಲಿ) ಹತ್ತಿರದಲ್ಲಿಲ್ಲದೆ.
  2. ಪರೋಕ್ಷವಾಗಿ; ನೇರವಾಗಿರದ ರೀತಿಯಲ್ಲಿ.
  3. ಅಭುಕ್ತ ಮೂಲೆಯಲ್ಲಿ; ಎಲ್ಲೋ ಕಾಡುಮೂಲೆಯಲ್ಲಿ.
  4. ಎಳ್ಳಷ್ಟೂ; ತಿಲಮಾತ್ರವೂ; ಅಲ್ಪಸ್ವಲ್ಪವೂ; ಲವಲೇಶವೂ: it is not related even remotely to the present subject ಪ್ರಕೃತ ವಿಷಯಕ್ಕೂ ಅದಕ್ಕೂ ಲವಲೇಶವೂ ಸಂಬಂಧ ಇಲ್ಲ.