remote ರಿಮೋಟ್‍
ಗುಣವಾಚಕ

(ತರ remoter, ತಮ remotest).

  1. (ಒಂದಕ್ಕೊಂದು) ದೂರವಾಗಿರುವ.
  2. (ಕಾಲ ಯಾ ದೇಶದಲ್ಲಿ, ನಂಟತನ ಮೊದಲಾದವುಗಳಲ್ಲಿ) ದೂರದ; ಹತ್ತಿರದ್ದಲ್ಲದ: it lies at a remote spot ಅದು ದೂರದ ಒಂದು ಸ್ಥಾನದಲ್ಲಿದೆ. memorials of remote ages ದೂರದ ಯುಗಗಳ ಸ್ಮಾರಕಗಳು.
    1. remote ancestor ದೂರದ ಪೂರ್ವಜ.
  3. ಪರೋಕ್ಷ ಸಂಬಂಧದ; ದೂರಸಂಬಂಧದ; ದೂರವಾದ ಯಾ ನೇರವಾಗಿರದ ಸಂಬಂಧವುಳ್ಳ: the point is remote from the subject ಆ ಅಂಶವು ವಿಷಯಕ್ಕೆ ದೂರವಾದದ್ದು.
  4. ಅಭುಕ್ತ ಮೂಲೆಯಲ್ಲಿರುವ; ಎಲ್ಲೋ ಕಾಡುಮೂಲೆಯಲ್ಲಿರುವ; ದಾರಿಬಿಟ್ಟು ಎಲ್ಲೋ ಇರುವ: a remote village ಅಭುಕ್ತ ಮೂಲೆಯ ಒಂದು ಹಳ್ಳಿ.
  5. (ಮುಖ್ಯವಾಗಿ ತಮರೂಪದಲ್ಲಿ) ಎಳ್ಳಷ್ಟೂ; ಅಲ್ಪಸ್ವಲ್ಪವೂ; ತಿಲಮಾತ್ರವೂ; ಲವಲೇಶವೂ: not the remotest notion of it ನನಗೆ ಅದರ ಎಳ್ಳಷ್ಟೂ ಕಲ್ಪನೆಯಿಲ್ಲ.
  6. (ವ್ಯಕ್ತಿಯ ವಿಷಯದಲ್ಲಿ) ಅಲಕ್ಕಾದ; ದೂರವಿರುವ; ಸ್ನೇಹಪರನಲ್ಲದ.