reminiscence ರೆಮಿನಿಸನ್ಸ್‍
ನಾಮವಾಚಕ
  1. ಸ್ಮರಣೆ:
    1. (ಹಿಂದೆ ನಡೆದದ್ದನ್ನು, ಮುಖ್ಯವಾಗಿ ಮರೆತು ಹೋದದ್ದನ್ನು) ಪ್ರಯಾಸಪಟ್ಟು ನೆನಪುಮಾಡಿಕೊಳ್ಳುವುದು.
    2. (ಹಿಂದಿನದರ) ನೆನವರಿಕೆ; ನೆನಪು; ಜ್ಞಾಪಕ; ಸ್ಮೃತಿ.
  2. ನೆನಪು; ಸ್ಮೃತಿ; ನೆನಪಿಗೆ ತಂದುಕೊಂಡ ಹಿಂದಿನ ಘಟನೆ ಯಾ ಸಂಗತಿ.
  3. (ಬಹುವಚನದಲ್ಲಿ) ನೆನಪುಗಳು; ಸ್ಮರಣೆಗಳು; ಲೇಖಕನ ಸ್ಮೃತಿಯಲ್ಲಿ ನಿಂತಿರುವ ಆತನ ಜೀವನದಲ್ಲಿ ನಡೆದ ಸ್ವಂತ ಹಾಗೂ ಸಾರ್ವಜನಿಕ ಘಟನೆಗಳ ಲಿಖಿತ ಸಾಹಿತ್ಯರೂಪ.
  4. ಸ್ಮಾರಕ; (ಯಾವುದೇ ವಿಷಯದಲ್ಲಿ, ಬೇರೊಂದರ) ನೆನಪನ್ನು ತರುವ ಅಂಶ: there is a reminiscence of the Greek type in her face ಆಕೆಯ ಮುಖದಲ್ಲಿ ಗ್ರೀಕ್‍ ಮಾದರಿಯ ನೆನಪನ್ನು ತರುವ ಲಕ್ಷಣವೊಂದಿದೆ.
  5. (ತತ್ತ್ವಶಾಸ್ತ್ರ) (ಮುಖ್ಯವಾಗಿ ಪ್ಲೇಟೋವಿನ ಸಿದ್ಧಾಂತದಲ್ಲಿ) ಸ್ಮೃತಿಸಿದ್ಧಾಂತ; ಹಿಂದಿನ ಜನ್ಮಗಳಲ್ಲಿ ಆತ್ಮವು ಕಂಡುಕೊಂಡಿದ್ದ ವಿಷಯಗಳ, ವಸ್ತುಗಳ ನೆನಪೇ ಜ್ಞಾನ ಎಂಬ ಪ್ಲೇಟೋವಿನ ವಾದ.