remembrancer ರೆಮೆಂಬ್ರನ್ಸರ್‍
ನಾಮವಾಚಕ

ಸ್ಮಾರಕ:

  1. ನೆನಪಿಗೆ ತಂದುಕೊಡುವವನು; ಜ್ಞಾಪಿಸುವವನು; ನೆನಪುಮಾಡಿಕೊಡುವವನು.
  2. ನೆನಪಿಗೆ ತರುವ ಸಲುವಾಗಿ ನೇಮಕಗೊಂಡ ಅಧಿಕಾರಿ.
  3. ನೆನಪಿಗೆ ತರುವ ಯಾವುದೇ ವಸ್ತು.
ಪದಗುಚ್ಛ
  1. King’s Queen’s Remembrancer ರಾಜನ, ರಾಣಿಯ ಸ್ಮಾರಕಾಧಿಕಾರಿ:
    1. ರಾಜನಿಗೆ, ರಾಣಿಗೆ, ಸಲ್ಲಬೇಕಾದ ಸಾಲಗಳನ್ನು ನೆನಪಿಗೆ ತಂದು ವಸೂಲುಮಾಡಿಕೊಡುವ ಅಧಿಕಾರಿ.
    2. ಇಂಗ್ಲೆಂಡಿನ ಖಜಾನೆಗೆ ಸೇರಿದ ನ್ಯಾಯಸ್ಥಾನದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿವಿಧ ವಿಷಯಗಳನ್ನು ನೆನಪಿಗೆ ತರುವ ಸಲುವಾಗಿ ನೇಮಕಗೊಂಡ ಅಧಿಕಾರಿ.
  2. City Remembrancer ಲಂಡನ್‍ ನಗರದ ಕಾರ್ಪೋರೇಷನ್ನಿನ ವಿಷಯಗಳನ್ನು ಪಾರ್ಲಿಮೆಂಟಿನ ಸಮಿತಿಯ ಗಮನಕ್ಕೆ ತರಲು ನೇಮಕವಾಗಿರುವ ನಗರದ ಸ್ಮಾರಕಾಧಿಕಾರಿ.