remember ರಿಮೆಂಬರ್‍
ಸಕರ್ಮಕ ಕ್ರಿಯಾಪದ
  1. ನೆನಪಿಡು; ಜ್ಞಾಪಕದಲ್ಲಿಟ್ಟುಕೊ; ಮರೆಯದಿರು.
  2. ನೆನಪಿಗೆ ತಂದುಕೊ; ಜ್ಞಾಪಿಸಿಕೊ.
  3. ಕಂಠಪಾಠ, ಕಂಠಸ್ಥ–ಮಾಡಿಕೊ.
  4. (ಯಾರನ್ನೇ ನೆನಪು ಮಾಡಿಕೊಂಡು ಅವರಿಗೆ)
    1. ಬಹುಮಾನ ಕೊಡು.
    2. ಬಕ್ಷೀಸು, ಇನಾಮು–ಕೊಡು: remember the waiters (ಹೋಟೆಲು ಮೊದಲಾದವುಗಳಲ್ಲಿ) ಪರಿಚಾರಕರಿಗೆ ಮರೆಯದೆ ಬಕ್ಷೀಸು ಕೊಡು.
    3. ಆಸ್ತಿಪಾಸ್ತಿಯನ್ನು (ಅವರ ಹೆಸರಿಗೆ) ಉಯಿಲಿನಲ್ಲಿ ಬರೆ: he remembered me in his will ಅವನು ತನ್ನ ಉಯಿಲಿನಲ್ಲಿ ನನಗೆ ಸ್ವಲ್ಪ ಆಸ್ತಿಯನ್ನು ಬರೆದ, ಬರೆದಿದ್ದ.
  5. (ದೇವರನ್ನು ಪ್ರಾರ್ಥಿಸುವಾಗ ಒಬ್ಬನನ್ನು) ನೆನೆ; ನೆನಪುಮಾಡಿಕೊ; ಸ್ಮರಿಸಿಕೊ.
  6. (ಬೇರೊಬ್ಬರ ಮೂಲಕ) ವಂದನೆಗಳನ್ನು, ನಮಸ್ಕಾರಗಳನ್ನು ಯಾ ಶುಭಾಶಯಗಳನ್ನು–ತಿಳಿಸು, ಕಳುಹಿಸು: remember me kindly to your family ನಿನ್ನ ಕುಟುಂಬ ವರ್ಗಕ್ಕೆ ನನ್ನ ಶುಭಾಶಯಗಳನ್ನು ತಿಳಿಸು. he begs to be remembered to you ಆತ ತಮಗೆ ತನ್ನ ನಮಸ್ಕಾರಗಳನ್ನು ತಿಳಿಸಿದ್ದಾನೆ.
ಪದಗುಚ್ಛ

remember oneself

  1. (ಅನುಚಿತವಾಗಿ ನಡೆದುಕೊಂಡ ಬಳಿಕ) ಉಚಿತ ವರ್ತನೆಯನ್ನು ನೆನಪಿಗೆ ತಂದುಕೊ.
  2. (ತಪ್ಪುಮಾಡಿಬಿಟ್ಟ ಮೇಲೆ) ತನ್ನ ನಿಜವಾದ ಉದ್ದೇಶವೇನೆಂಬುದನ್ನು ನೆನಪಿಗೆ ತಂದುಕೊ.