See also 2remedy
1remedy ರೆಮಿಡಿ
ನಾಮವಾಚಕ
(ಬಹುವಚನ remedies).
  1. ರೋಗ ನಿವಾರಣೆ; ರೋಗ ಪರಿಹಾರ; ರೋಗವನ್ನು ಗುಣಪಡಿಸುವ ಔಷಧ ಯಾ ಚಿಕಿತ್ಸೆ.
  2. ಪರಿಹಾರೋಪಾಯ; ಅನಿಷ್ಟವಾದುದನ್ನು ಎದುರಿಸಲು ಯಾ ನಿವಾರಿಸಲು ಬೇಕಾದ ವಿಧಾನ.
  3. ಪರಿಹಾರ; ನ್ಯಾಯಾಲಯ ನೀಡುವ ಯಾ ಇತರ ಬಗೆಯ ಪರಿಹಾರ.
  4. (ನಾಣ್ಯದ ವಿಷಯದಲ್ಲಿ) ಪ್ರಮಾಣಭೇದ; ಟಂಕಿಸಿದ ನಾಣ್ಯಗಳ ಚೊಕ್ಕತನ ಹಾಗೂ ತೂಕ ಕಟ್ಟಳೆಯಾದ ಪ್ರಮಾಣಕ್ಕಿಂತ ವ್ಯತ್ಯಾಸವಾಗಿರಲು ಅವಕಾಶ ಕೊಡುವ ಅಂತರ.
See also 1remedy
2remedy ರೆಮಿಡಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ remedies; ಭೂತರೂಪ ಮತ್ತು ಭೂತಕೃದಂತ remedied).
  1. (ವಿರಳ ಪ್ರಯೋಗ) (ಔಷಧ ಕೊಡುವುದೇ ಮೊದಲಾದಚಿಕಿತ್ಸೆಯಿಂದ) ರೋಗವನ್ನು–ಗುಣಪಡಿಸು, ನಿವಾರಿಸು, ಪರಿಹರಿಸು.
  2. (ತಪ್ಪು, ಅನ್ಯಾಯ ಮೊದಲಾದವನ್ನು) ಸರಿಪಡಿಸು; ನೇರ್ಪಡಿಸು; ಪರಿಹಾರಮಾಡು.