See also 2remainder
1remainder ರಿಮೇಂಡರ್‍
ನಾಮವಾಚಕ
  1. (ನ್ಯಾಯಶಾಸ್ತ್ರ) (ಆಸ್ತಿಯ ಅನುಭವದ ಹಕ್ಕನ್ನು ಒಬ್ಬನಿಗೆ ಕೊಟ್ಟಾಗ ಅವನ ಜೀವಾವಧಿಯ ಬಳಿಕ ಎರಡನೆಯನೊಬ್ಬನಿಗೆ ಅವನ ಜೀವಾವಧಿ ಅದನ್ನು ಅನುಭವಿಸುವ ಹಕ್ಕನ್ನು ಪತ್ರದ ಮೂಲಕ ಬರೆದುಕೊಟ್ಟಲ್ಲಿ, ಆ ಎರಡನೆಯವನ) ಉಳಿಕೆಯ ಹಕ್ಕು; ಶೇಷಾಧಿಕಾರ.
  2. ಉಳಿದ, ಮಿಕ್ಕ ಭಾಗ; ಉಳಿಕೆ; ಶೇಷ.
  3. ಉಳಿದ ಜನಗಳು ಯಾ ಮಿಕ್ಕವಸ್ತುಗಳು.
  4. ಶೇಷ; ಭಾಗಿಸಿದ ಯಾ ಕಳೆದ ನಂತರ ಉಳಿದ ಸಂಖ್ಯೆ.
  5. ಮಿಕ್ಕ ಪ್ರತಿಗಳು; ಬೇಡಿಕೆ ಕುಸಿದ ಮೇಲೆ ಮಾರಾಟವಾಗದೆ ಉಳಿದ ಪುಸ್ತಕದ ಪ್ರತಿಗಳು.
See also 1remainder
2remainder ರಿಮೇಂಡರ್‍
ಸಕರ್ಮಕ ಕ್ರಿಯಾಪದ

ಉಳಿದ ಪ್ರತಿಗಳನ್ನು (ಕಡಮೆ ಬೆಲೆಗೆ)–ಮಾರು, ಮಾರಿಬಿಡು, ಮಾರಿಹಾಕು.