religion ರಿಲಿಜನ್‍
ನಾಮವಾಚಕ
  1. ಸಂನ್ಯಾಸಾಶ್ರಮ; ಸಂನ್ಯಾಸಿಯ ಯಾ ಸಂನ್ಯಾಸಿನಿಯ–ಸ್ಥಿತಿ, ಜೀವನ: the way of religion ಸಂನ್ಯಾಸಿಯ ಜೀವನ (ಮಾರ್ಗ).
  2. (ವಿರಳ ಪ್ರಯೋಗ) ಸಂನ್ಯಾಸಿ–ಸಂಘ, ಬಳಗ.
  3. ಧಾರ್ಮಿಕ–ವ್ರತಾಚರಣೆ, ಕರ್ಮಾಚರಣೆ, ಕರ್ಮಾನುಷ್ಠಾನ.
  4. ಧರ್ಮ; ಮತ: Christian religion ಕ್ರೈಸ್ತಧರ್ಮ.
  5. ಧರ್ಮ–ಶ್ರದ್ಧೆ, ನಿಷ್ಠೆ; ಆಸ್ತಿಕತೆ; ದೇವರಲ್ಲಿ ನಂಬಿಕೆ: a true man of religion ನಿಜಕ್ಕೂ ಧರ್ಮಶ್ರದ್ಧೆಯುಳ್ಳವನು.
  6. ಕರ್ತವ್ಯ; ಧರ್ಮ: make religion of paying social calls ಬಂಧುಮಿತ್ರಾದಿಗಳನ್ನು ಭೇಟಿ ಮಾಡುವುದನ್ನೇ ಒಂದು ಕರ್ತವ್ಯವನ್ನಾಗಿ, ಧರ್ಮವನ್ನಾಗಿ ಮಾಡಿಕೊ.
  7. ಧರ್ಮ; ಒಬ್ಬನು ಯಾವುದಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಾನೋ ಅದು: football is their religion ಹುಟ್ಬಾಲ್‍ ಆಟ ಅವರ ಧರ್ಮ.
ಪದಗುಚ್ಛ
  1. established religion ಚರ್ಚ್‍ ಆಹ್‍ ಇಂಗ್ಲೆಂಡ್‍ ಎಂಬ ಪ್ರಾಟೆಸ್ಟೆಂಟ್‍ ಪಂಥ; ಇಂಗ್ಲೆಂಡಿನ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಾಟೆಸ್ಟೆಂಟ್‍ ಶಾಖೆ.
  2. freedom of religion ಧಾರ್ಮಿಕ ಸ್ವಾತಂತ್ರ್ಯ; ತನಗೆ ಇಷ್ಟ ಬಂದ ಧರ್ಮವನ್ನು ಅನುಸರಿಸಬಹುದಾದ ಸ್ವಾತಂತ್ರ್ಯ.