relieve ರಿಲೀವ್‍
ಸಕರ್ಮಕ ಕ್ರಿಯಾಪದ
  1. ತಗ್ಗಿಸು; ಕಡಮೆಮಾಡು; ಉಪಶಮನಗೊಳಿಸು: the doctor relieved him of his pain ವೈದ್ಯನು ಅವನ ನೋವನ್ನು ತಗ್ಗಿಸಿದನು.
  2. (ಮನಸ್ಸಿನ ಸಂಕಟ, ವ್ಯಥೆ, ಕಳವಳ ಮೊದಲಾದವನ್ನು) ಹಗುರಗೊಳಿಸು ಯಾ ಸಮಾಧಾನಗೊಳಿಸು: relieving distress ಸಂಕಟವನ್ನು ಹಗುರಗೊಳಿಸುವುದು ಯಾ ಸಮಾಧಾನಗೊಳಿಸುವುದು.
  3. (ಶತ್ರುವಿನ ದಾಳಿ ಯಾ ಮುತ್ತಿಗೆಗೊಳಗಾದ ನಗರ, ಕೋಟೆ ಮೊದಲಾದವುಗಳ) ಮುತ್ತಿಗೆ ಬಿಡಿಸು: the fort was relieved ಕೋಟೆಗೆ ಹಾಕಿದ್ದ ಮುತ್ತಿಗೆಯನ್ನು ಬಿಡಿಸಲಾಯಿತು.
  4. (ಸರದಿ ಮುಗಿದ ಕಾವಲುಗಾರ ಮೊದಲಾದವರ ಬದಲಿಯಾಗಿ ಬಂದು) ಸರದಿಯಿಂದ ಬಿಡುಗಡೆ ಮಾಡು: relieve guard (ಕಾವಲುಗಾರನ ಬದಲಿಯಾಗಿ ಬಂದು) ಅವನನ್ನು ಕಾವಲಿನಿಂದ ಬಿಡಿಸು.
  5. (ಒಬ್ಬನ ಭಾರವನ್ನು, ಹೊಣೆಯನ್ನು) ಕಳೆ; ನಿವಾರಿಸು.
  6. (ಹಾಸ್ಯ ಪ್ರಯೋಗ) ಒಬ್ಬನ ಹಣ, ವಸ್ತುಗಳು ಮೊದಲಾದವನ್ನು ಕಸಿದುಕೊ: a tramp relieved him of his purse ಯಾವನೋ ದಾರಿಗಳ್ಳ ಅವನ ಹಣದ ಚೀಲದ ಭಾರವನ್ನು ಕಳೆದ.
  7. (ಮುಖ್ಯವಾಗಿ ಭೂತಕೃದಂತದಲ್ಲಿ) ಸ್ಫುಟವಾಗಿ ಕಾಣುವಂತೆ, ಎದ್ದು ಕಾಣುವಂತೆ–ಮಾಡು; ಹಿನ್ನೆಲೆಯಿಂದ ಉಬ್ಬಿದಂತೆ ಚಿತ್ರಿಸು.
  8. ಬೇಸರವನ್ನು, ಏಕತಾನತೆಯನ್ನು–ತಗ್ಗಿಸು, ತೊಲಗಿಸು, ನಿವಾರಿಸು, ಪರಿಹರಿಸು.
ಪದಗುಚ್ಛ
  1. relieving arch ಭಾರ ನಿವಾರಕ, ಪರಿಹಾರಕ ಕಮಾನು; ಕೆಳಭಾಗದ ಮೇಲೆ ಭಾರ ಬೀಳದಂತೆ ತಪ್ಪಿಸಲು ಗೋಡೆಯಲ್ಲಿ ಹುದುಗಿಸಿ ಕಟ್ಟಿದ ಕಮಾನು.
  2. relieve nature ದೇಹಬಾಧೆ ಕಳೆದುಕೊ; ಮಲಮೂತ್ರ ವಿಸರ್ಜಿಸಿ ದೇಹವನ್ನು ಹಗುರಗೊಳಿಸಿಕೊ.
  3. relieve oneself ಮಲ ಯಾ ಮೂತ್ರ–ವಿಸರ್ಜಿಸು, ವಿಸರ್ಜನೆ ಮಾಡು.
  4. relieve one’s feelings
    1. (ಮನಸ್ಸಿನ ದುಃಖವನ್ನು ತೋಡಿಕೊಂಡು) ಮನಸ್ಸನ್ನು ಹಗುರಗೊಳಿಸಿಕೊ, ಸಮಾಧಾನಮಾಡಿಕೊ.
    2. (ಬಿರುನುಡಿಗಳನ್ನಾಡಿ ಯಾ ಕೂಗಾಡಿ) ಮನಸ್ಸಿನ ಕೋಪತಾಪವನ್ನು, ಕೋಪಾವೇಶವನ್ನು–ತೊಲಗಿಸಿಕೊ, ನಿವಾರಿಸಿಕೊ.