See also 2release
1release ರಿಲೀಸ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ತನಗೆ ಸಲ್ಲಬೇಕಾದ ಸಾಲ, ಆಸ್ತಿ, ಹಕ್ಕು ಮೊದಲಾದವನ್ನು ಸಲ್ಲಿಸಬೇಕಾದವನಿಗೆ ಯಾ ಬೇರೊಬ್ಬನಿಗೆ) ಬಿಟ್ಟುಕೊಡು.
  2. (ಸೆರೆಯಿಂದ, ಬಂಧನದಿಂದ) ಬಿಡುಗಡೆ ಮಾಡು; ವಿಮೋಚನೆಗೊಳಿಸು.
  3. (ಬಡತನ, ರೋಗ ಮೊದಲಾದವುಗಳಿಂದ) ವಿಮುಕ್ತಗೊಳಿಸು; ಪಾರುಮಾಡು.
  4. (ಚಲನಚಿತ್ರ, ಹೊಸಪುಸ್ತಕ ಮೊದಲಾದವನ್ನು) ಬಿಡುಗಡೆ ಮಾಡು; ಸಾರ್ವಜನಿಕ ಪ್ರದರ್ಶನ, ವಾಚನ ಮೊದಲಾದವಕ್ಕೆ ಒದಗಿಸು.
  5. ಬಿಡುಗಡೆ ಮಾಡು; ವಿಮೋಚಿಸು; ಒಂದು ಸ್ಥಿರಗೊಳಿಸಿದ ಸ್ಥಾನದಿಂದ ಚಲಿಸಲು ಬಿಡು.
  6. (ಮಾಹಿತಿ, ಧ್ವನಿಮುದ್ರಣ ಮೊದಲಾದವನ್ನು) ಬಿಡುಗಡೆಮಾಡು; ಸಾರ್ವಜನಿಕವಾಗಿ ಸಿಕ್ಕುವಂತೆ ಮಾಡು.
See also 1release
2release ರಿಲೀಸ್‍
ನಾಮವಾಚಕ
  1. (ಸೆರೆ, ಕರ್ತವ್ಯ ಮೊದಲಾದವುಗಳಿಂದ) ಬಿಡುಗಡೆ; ವಿಮೋಚನೆ.
  2. (ಕಷ್ಟ, ದುಃಖ, ಕರ್ತವ್ಯ, ಕಟ್ಟುಪಾಡು ಮೊದಲಾದವುಗಳಿಂದ) ಬಿಡುಗಡೆ; ವಿಮುಕ್ತಿ.
  3. (ನ್ಯಾಯಶಾಸ್ತ್ರ)
    1. ಬಿಡುಗಡೆಯ ಚೀಟಿ; ಖುಲಾಸೆಪತ್ರ.
    2. ರಶೀತಿ; ಸಲ್ಲಿಕೆಯ ಚೀಟಿ.
    1. (ಹಕ್ಕನ್ನೋ ಸ್ಥಿರ ಸ್ವತ್ತನ್ನೋ ಕಾನೂನಿನ ಪ್ರಕಾರ ಬೇರೊಬ್ಬನಿಗೆ) ಬಿಟ್ಟುಕೊಡುವುದು; ರಿಹಾಯಿ.
    2. ರಿಹಾಯಿಚೀಟಿ; ಬಿಡುಗಡೆಯ ಚೀಟಿ.
  4. (ಯಂತ್ರದ ಕೀಲು, ಬೆಣೆ ಮೊದಲಾದವನ್ನು ಚಲಿಸುವಂತೆ) ಬಿಡುಗಡೆಮಾಡುವ ಹಿಡಿ, ಕೊಂಡಿ ಮೊದಲಾದವು.
  5. (ಪ್ರಕಟಣೆಗಾಗಿ) ಬಿಡುಗಡೆ ಮಾಡಿದ ದಾಖಲೆ ಯಾ ಮಾಹಿತಿ: press release ಪತ್ರಿಕೆಯಲ್ಲಿ ಬಿಡುಗಡೆಗಾಗಿ ಕೊಟ್ಟ ಮಾಹಿತಿ.
    1. (ಹಿಲ್ಮ್‍, ಧ್ವನಿಮುದ್ರಣ ಮೊದಲಾದವುಗಳ) ಬಿಡುಗಡೆ ಮಾಡುವಿಕೆ.
    2. ಹೀಗೆ ಬಿಡುಗಡೆ ಮಾಡಿದ ಹಿಲ್ಮ್‍, ಧ್ವನಿಮುದ್ರಣ ಮೊದಲಾದವು.