relaxation ರಿಲ್ಯಾಕ್ಸೇಷನ್‍
ನಾಮವಾಚಕ
    1. (ಶಿಕ್ಷೆ, ತೆರಿಗೆ, ಸುಂಕ ಮೊದಲಾದವನ್ನು) ಸಡಿಲಿಸುವುದು, ಭಾಗಶಃ ಇಳಿಸುವುದು, ತಗ್ಗಿಸುವುದು.
    2. (ಶಿಕ್ಷೆ, ತೆರಿಗೆ, ಸುಂಕ ಮೊದಲಾದವುಗಳ) ಸಡಿಲಿಕೆ; ಭಾಗಶಃ ಇಳಿತ, ರಿಯಾಯಿತಿ.
  1. (ಕೆಲಸದ ಹೊರೆಯ ಯಾ ಬಿರುಸಿನ) ಸಡಿಲಿಕೆ.
    1. (ಮುಖ್ಯವಾಗಿ ಕೆಲಸದ ತರುವಾಯದ) ಬಿಡುವು; ವಿಶ್ರಾಂತಿ.
    2. ವಿನೋದ ವಿಹಾರ.
  2. (ಬಿಗಡಾಯಿಸಿರುವ ಪರಿಸ್ಥಿತಿಯ ಯಾ ಮನಃಸ್ಥಿತಿಯ) ಶಮನ; ಉಲ್ಬಣದ ಯಾ ದುಗುಡದ ತಗ್ಗಿಕೆ.
  3. (ಭೌತವಿಜ್ಞಾನ) ವಿಶ್ರಾಂತಿ; ವಿಶ್ರಮ(ಣ); ಕ್ಷೋಭೆಯ ನಂತರ ಸಮತೋಲನದ ಪುನಃಸ್ಥಾಪನೆ.
  4. ಶಮನ; ತೀವ್ರತೆ, ಕರಾರುವಾಕ್ಕು ಮೊದಲಾದವುಗಳು ಕಡಮೆಯಾಗುವುದು.