relax ರಿಲ್ಯಾಕ್ಸ್‍
ಸಕರ್ಮಕ ಕ್ರಿಯಾಪದ
  1. (ಮಾಂಸಖಂಡ ಮೊದಲಾದವನ್ನು) ಸಡಿಲಗೊಳಿಸು; ಸಡಿಲಿಸು; ಅಳ್ಳಕಗೊಳಿಸು: he relaxed the muscles ಅವನು ತನ್ನ ಮಾಂಸಖಂಡಗಳನ್ನು ಸಡಿಲಿಸಿದ.
  2. (ಬಿಗಿ, ಹಿಡಿತ, ಬಲ, ತೀವ್ರತೆ ಮೊದಲಾದವನ್ನು) ಸಡಿಲಿಸು; ತಗ್ಗಿಸು; ಕಡಮೆ ಮಾಡು: relax one’s hold ಹಿಡಿತವನ್ನು ಸಡಿಲಿಸು. relax the rigour ಬಿಗುವನ್ನು ಸಡಿಲಿಸು.
  3. (ಬಿಗುಮಾನ, ಮುಖಮುದ್ರೆಯ ಕಾಠಿನ್ಯ ಮೊದಲಾದವನ್ನು) ತಗ್ಗಿಸು; ಕಡಮೆ ಮಾಡು: relax one’s stiff attitude ತನ್ನ ಬಿಗುಮಾನವನ್ನು ತಗ್ಗಿಸು. relax one’s features ತನ್ನ ಮುಖಮುದ್ರೆಯ ಕಾಠಿನ್ಯವನ್ನು ತಗ್ಗಿಸು. relax one’s faith, one’s attention, etc. ತನ್ನ ಶ್ರದ್ಧೆ, ಗಮನ ಮೊದಲಾದವನ್ನು ಕಡಮೆ ಮಾಡು.
  4. ಬಲಗುಂದಿಸು; ದುರ್ಬಲಗೊಳಿಸು; ಶಕ್ತಿ ಉಡುಗಿಸು: this place has a relaxing climate ಈ ಸ್ಥಳದಲ್ಲಿ ಶಕ್ತಿಯನ್ನು ಉಡುಗಿಸುವಂತಹ ವಾಯುಗುಣವಿದೆ.
  5. (ರೂಪಕವಾಗಿ) (ನಿಯಮ ಮೊದಲಾದವನ್ನು) ಸಡಿಲಿಸು ( ಅಕರ್ಮಕ ಕ್ರಿಯಾಪದ ಸಹ): he relaxed the rule ನಿಯಮವನ್ನು ಅವನು ಸಡಿಲಿಸಿದ.
ಅಕರ್ಮಕ ಕ್ರಿಯಾಪದ
  1. (ಮಾಂಸಖಂಡ ಮೊದಲಾದವುಗಳ ವಿಷಯದಲ್ಲಿ) ಸಡಿಲವಾಗು; ಸಡಿಲಗೊಳ್ಳು; ಅಳ್ಳಕವಾಗು: the muscle relaxed ಮಾಂಸಖಂಡವು ಸಡಿಲಗೊಂಡಿತು.
  2. (ಬಿಗಿ, ಹಿಡಿತ, ಬಲ, ತೀವ್ರತೆ ಮೊದಲಾದವುಗಳ ವಿಷಯದಲ್ಲಿ) ಸಡಿಲವಾಗು; ಸಡಿಲಗೊಳ್ಳು; ತಗ್ಗು; ಕಡಮೆ ಆಗು.
  3. (ಬಿಗುಮಾನ, ಮುಖಮುದ್ರೆಯ ಕಾಠಿಣ್ಯ ಮೊದಲಾದವುಗಳ ವಿಷಯದಲ್ಲಿ) ತಗ್ಗು; ಕಡಮೆಯಾಗು: his features relaxed ಅವನ ಮುಖಮುದ್ರೆಯ ಕಾಠಿನ್ಯ ತಗ್ಗಿತು. his attention relaxed ಅವನ ಗಮನ ಕುಂಠಿತವಾಯಿತು.
  4. ವಿರಮಿಸು; ಕೆಲಸ ಯಾ ಪ್ರಯತ್ನ ನಿಲ್ಲಿಸು.
ಪದಗುಚ್ಛ

relaxed throat (ವೈದ್ಯಶಾಸ್ತ್ರ) (ಉರಿಯೂತದಿಂದಾಗುವ) ಗಂಟಲ ಕುಸಿತ.