relativity ರೆಲಟಿವಿಟಿ
ನಾಮವಾಚಕ
  1. ಸಾಪೇಕ್ಷತೆ; ಬೇರೊಂದರ ಸಂಬಂಧದಿಂದ ಅಸ್ತಿತ್ವವನ್ನು ಯಾ ಅರ್ಥವನ್ನು ಹೊಂದಿರುವುದು.
  2. (ಭೌತವಿಜ್ಞಾನ)
    1. ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ; ಚಲನೆ ಎಂಬುದು ಯಾವಾಗಲೂ ಸಾಪೇಕ್ಷವಾದುದು, ಭೌತ ವೈಜ್ಞಾನಿಕ ನಿಯಮಗಳ ಗಣಿತೀಯ ಉಕ್ತಿಗಳು ಎಲ್ಲ ಜಡತ್ವ ವ್ಯವಸ್ಥೆಗಳಿಗೂ ಒಂದೇ ರೀತಿ ಅನ್ವಯಿಸುತ್ತವೆ, ಶೂನ್ಯದಲ್ಲಿಯ ಬೆಳಕಿನ ವೇಗವು ಆಕರವನ್ನಾಗಲಿ ವೀಕ್ಷಕನನ್ನಾಗಲಿ ಅವಲಂಬಿಸದೆ ಸದಾ ಸ್ಥಿರವಾಗಿರುವುದು, ವ್ಯೋಮ ಮತ್ತು ಕಾಲಗಳು ಪರಸ್ಪರ ಸಂಬಂಧವಿಲ್ಲದವೆಂದು ಪರಿಗಣಿಸದೆ, ಕಾಲವನ್ನು ವ್ಯೋಮ–ಕಾಲ ಅಖಂಡದ ನಾಲ್ಕನೆಯ ಆಯಾಮವೆಂದು ಪರಿಗಣಿಸತಕ್ಕದ್ದು ಎಂಬ ತತ್ತ್ವಗಳ ಆಧಾರದ ಮೇಲೆ ಆಲ್ಬರ್ಟ್‍ ಐನ್‍ಸ್ಟೈನ್‍ 1905ರಲ್ಲಿ ಪ್ರತಿಪಾದಿಸಿದ ಸಿದ್ಧಾಂತ.
    2. ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ; ಮೇಲೆ 2a ಯಲ್ಲಿ ವಿವರಿಸಿದ ಸಾಪೇಕ್ಷತಾ ಸಿದ್ಧಾಂತವನ್ನು ಗುರುತ್ವಕ್ಕೆ ಮತ್ತು ವೇಗೋತ್ಕರ್ಷಕ್ಕೆ ವಿಸ್ತರಿಸಲಾದ ಸಿದ್ಧಾಂತ.
ಪದಗುಚ್ಛ
  1. general theory of relativity = relativity (2b).
  2. special theory of relativity = relativity (2a).