relativism ರೆಲಟಿವಿಸಮ್‍
ನಾಮವಾಚಕ

(ತತ್ತ್ವಶಾಸ್ತ್ರ) ಸಾಪೇಕ್ಷತಾ ಸಿದ್ಧಾಂತ:

  1. (ಮಾನವನ ಮನಸ್ಸು ಹಾಗೂ ಜ್ಞಾನಕ್ಕೆ ಸಾಧಕವಾದ ಕಟ್ಟುಪಾಡುಗಳು ಪರಿಮಿತಸ್ವರೂಪದವು, ಆದ್ದರಿಂದ ಪಾರಮಾರ್ಥಿಕ ಜ್ಞಾನವನ್ನು ಪಡೆಯುವುದು ಅಸಾಧ್ಯ ಎಂದು ಪ್ರತಿಪಾದಿಸುವ) ಸಾಪೇಕ್ಷಜ್ಞಾನ ಮೀಮಾಂಸೆ.
  2. (ನೈತಿಕ ಸತ್ಯಗಳು ಅವುಗಳಲ್ಲಿ ನಂಬಿಕೆಯುಳ್ಳ ವ್ಯಕ್ತಿಗಳನ್ನೂ ಸಮುದಾಯಗಳನ್ನೂ ಅವಲಂಬಿಸಿರುತ್ತವೆ, ಹೀಗಾಗಿ ಒಬ್ಬ ವ್ಯಕ್ತಿಗೆ ಯಾ ಒಂದು ಸಮುದಾಯಕ್ಕೆ ಸರಿಯೆಂದು ತೋರಿದುದೇ ಬೇರೊಬ್ಬ ವ್ಯಕ್ತಿಗೆ ಯಾ ಬೇರೊಂದು ಸಮುದಾಯಕ್ಕೆ ತಪ್ಪೆಂದು ತೋರಬಹುದು ಎಂದು ಪ್ರತಿಪಾದಿಸುವ) ಸಾಪೇಕ್ಷ ನೈತಿಕ ಸಿದ್ಧಾಂತ.