relation ರಿಲೇಷನ್‍
ನಾಮವಾಚಕ
  1. ಕಥನ; ನಿರೂಪಣೆ: his relation of the events ಘಟನೆಗಳನ್ನು ಕುರಿತ ಅವನ ಕಥನ, ನಿರೂಪಣೆ.
  2. (ನ್ಯಾಯಶಾಸ್ತ್ರ) (ಅಟಾರ್ನಿ ಜನರಲ್‍ ಅವರು ತಕ್ಕ ಕ್ರಮ ಜರುಗಿಸಲು ಅನುಕೂಲಿಸುವಂತೆ ಅವರ ಮುಂದೆ ವ್ಯವಹಾರಕ್ಕೆ) ಸಂಬಂಧಪಟ್ಟ ವಿಷಯವನ್ನು ಕಥನಮಾಡುವುದು; (ವಿಷಯದ) ಕಥನ, ನಿರೂಪಣೆ, ಮಂಡನ: proceeding at the relation of the Board of Trade (ಬ್ರಿಟನ್ನಿನ) ಬೋರ್ಡ್‍ ಆಹ್‍ ಟ್ರೇಡ್‍ ಮಾಡಿದ ಕಥನದ ಆಧಾರದ ಮೇಲೆ ಜರುಗಿಸಿದ (ಕಾರ್ಯ)ಕ್ರಮ.
  3. (ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ, ಒಂದು ವಸ್ತುವಿಗೂ ಇನ್ನೊಂದಕ್ಕೂ, ಒಂದು ವಿಷಯಕ್ಕೂ ಇನ್ನೊಂದಕ್ಕೂ ಇರುವ ಸಾದೃಶ್ಯ, ವೈದೃಶ್ಯ ಯಾ ಭಾವುಕ ಮೊದಲಾದ) ಸಂಬಂಧ: bears no relation to facts ವಸ್ತುಸ್ಥಿತಿಗೆ ಯಾವ ಸಂಬಂಧವನ್ನೂ, ಸಾದೃಶ್ಯವನ್ನೂ ಹೊಂದಿಲ್ಲ. the relation between them is that of guardian and ward ಅವರಿಬ್ಬರ ಸಂಬಂಧ ಪೋಷಕ–ಪೋಷಿತ ಸಂಬಂಧ. the relations between them are rather strained ಅವರಿಬ್ಬರ ಸಂಬಂಧ ಸ್ವಲ್ಪ ಬಿಗಡಾಯಿಸಿದೆ. the relations expressed by prepositions are primarily those of place and time ಉಪಸರ್ಗಗಳು ಸೂಚಿಸುವ ಸಂಬಂಧಗಳು ಪ್ರಧಾನವಾಗಿ ಕಾಲದೇಶಗಳನ್ನು ಕುರಿತವು.
  4. ನಂಟು; ನಂಟತನ; ಸಂಬಂಧ (ರೂಪಕವಾಗಿ ಸಹ).
  5. ನಂಟ; ಸಂಬಂಧಿ: what relation is he to you? ಆತ ನಿನಗೆ ಹೇಗೆ ನಂಟ? ಆತ ನಿನಗೇನಾಗಬೇಕು?
  6. (ಬಹುವಚನದಲ್ಲಿ) (with ಒಡನೆ)
    1. ಸಂಬಂಧಗಳು; ವ್ಯವಹಾರಗಳು.
    2. ಲೈಂಗಿಕ ಸಂಬಂಧ.
ಪದಗುಚ್ಛ

in relation to ಅದಕ್ಕೆ ಸಂಬಂಧಿಸಿದಂತೆ.