relate ರಿಲೇಟ್‍
ಸಕರ್ಮಕ ಕ್ರಿಯಾಪದ
  1. (ಘಟನೆ, ಪ್ರಸಂಗ, ವೃತ್ತಾಂತ ಮೊದಲಾದವನ್ನು) ಹೇಳು; ನಿರೂಪಿಸು; ಒಕ್ಕಣಿಸು; ಕಥನಮಾಡು.
  2. ಸಂಬಂಧ ಉಂಟುಮಾಡು, ಕಲ್ಪಿಸು: relate these phenomena to one another ಈ ವಿದ್ಯಮಾನಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧಕಲ್ಪಿಸು.
  3. (ಕರ್ಮಣಿಯಲ್ಲಿ) (ಅನೇಕವೇಳೆ to ಜತೆಗೆ) ಸಂಬಂಧಿಯಾಗಿರು; ರಕ್ತಸಂಬಂಧ ಹೊಂದಿರು ಯಾ ವಿವಾಹದಿಂದ ಸಂಬಂಧಿಸಿರು.
ಅಕರ್ಮಕ ಕ್ರಿಯಾಪದ
  1. ಸಂಬಂಧಿಸಿರು: every part of the machine relates to the next ಆ ಯಂತ್ರದ ಪ್ರತಿಯೊಂದು ಭಾಗವೂ ಪಕ್ಕದ ಭಾಗಕ್ಕೆ ಸಂಬಂಧಿಸಿದೆ.
  2. ಸಂಬಂಧ ಮಾಡಿಕೊ; ಸೇರಿಕೊ; ಕೂಡಿಕೊ.