See also 2rein
1rein ರೇನ್‍
ನಾಮವಾಚಕ
  1. (ಏಕವಚನ ಯಾ ಬಹುವಚನದಲ್ಲಿ) ಲಗಾಮು; ಕುದುರೆಯನ್ನು ಅಂಕೆಯಲ್ಲಿಟ್ಟುಕೊಳ್ಳಲು ಅದರ ಬಾಯಲ್ಲಿ ಸಿಕ್ಕಿಸುವ ಕಬ್ಬಿಣದ ತುಂಡು ಮತ್ತು ಅದಕ್ಕೆ ಕಟ್ಟುವ ಪಟ್ಟಿ; ವಾಘ.
  2. ಚಿಕ್ಕ ಮಗುವನ್ನು ಅಂಕೆಯಲ್ಲಿಡಲು ಬಳಸುವ ಅಂಥದೇ ಸಾಧನ.
  3. (ರೂಪಕವಾಗಿ) ನಿಯಂತ್ರಣಸಾಧನ; ಲಗಾಮು; ಮೂಗುದಾರ.
ಪದಗುಚ್ಛ
  1. draw the reins
    1. ಕುದುರೆಯನ್ನು ನಿಲ್ಲಿಸು.
    2. ತೊಡಗಿದ ಕೆಲಸ ನಿಲ್ಲಿಸು, ತೊರೆ; ಪ್ರಯತ್ನವನ್ನು ಕೈಬಿಡು.
    3. (ವೆಚ್ಚ ಮೊದಲಾದವನ್ನು) ಕಡಮೆ ಮಾಡು; ಹಿಡಿತದಲ್ಲಿಡು.
  2. give (horse) the reins ಲಗಾಮನ್ನು ಸಡಿಲಗೊಳಿಸು; ಕುದುರೆಯನ್ನು ಸರಾಗವಾಗಿ ಓಡಗೊಡು.
  3. throw the reins ಲಗಾಮನ್ನು ಎಸೆ, ಎಸೆದುಬಿಡು; ಲಗಾಮನ್ನು ಸಡಿಲಿಸು; ಕುದುರೆಯನ್ನು ಸರಾಗವಾಗಿ ಓಡಗೊಡು.
  4. give free rein to one’s imagination etc. ತನ್ನ ಕಲ್ಪನೆ ಮೊದಲಾದವನ್ನು ಸ್ವೇಚ್ಛೆಯಾಗಿ ಹರಿಯಗೊಡು.
  5. assume the reins of (government) etc. (ಸರ್ಕಾರ ಮೊದಲಾದವುಗಳ) ಆಡಳಿತ (ಸೂತ್ರ)ವಹಿಸಿಕೊ.
  6. drop the reins of (government) (ಸರ್ಕಾರ ಮೊದಲಾದವುಗಳ) ಆಡಳಿತವನ್ನು ತ್ಯಜಿಸು; ರಾಜಿನಾಮೆ ಕೊಡು.
  7. keep a tight rein on ಸ್ವಲ್ಪವೂ ಸ್ವಾತಂತ್ರ್ಯಕೊಡದಿರು; ಭದ್ರವಾಗಿ ಲಗಾಮು ಹಿಡಿದಿರು.
See also 1rein
2rein ರೇನ್‍
ಸಕರ್ಮಕ ಕ್ರಿಯಾಪದ
  1. ಲಗಾಮಿನಿಂದ–ತಡೆ, ಹತೋಟಿಮಾಡು, ಹತೋಟಿಯಲ್ಲಿಡು.
  2. (ರೂಪಕವಾಗಿ) ಸ್ವಾಧೀನದಲ್ಲಿಡು; ಹತೋಟಿಯಲ್ಲಿಡು; ತಡೆದಿಡು; ಸಂಯಮದಲ್ಲಿಡು.
  3. ಲಗಾಮೆಳೆದು ನಿಲ್ಲಿಸು, ತಡೆ (ರೂಪಕವಾಗಿ ಸಹ).