regulate ರೆಗ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಕಟ್ಟಿಗೊಳಪಡಿಸು; ವಿಧಿಬದ್ಧಗೊಳಿಸು; ನಿಯಮಗಳಿಗೊಳಪಡಿಸು; ನಿಯಂತ್ರಣಗೊಳಿಸು.
  2. ಮಿತಿಗೊಳಿಸು; ಆವಶ್ಯಕತೆಗೆ ತಕ್ಕಷ್ಟು ಆಗುವಂತೆ, ಮಿತಿಮೀರದಂತೆ ಹತೋಟಿಗೊಳಿಸು.
  3. (ಗಡಿಯಾರ ಮೊದಲಾದ ಯಂತ್ರವನ್ನು) ಕ್ರಮಪಡಿಸು; ನಿಯಂತ್ರಿಸು; ಕರಾರುವಾಕ್ಕಾಗಿ ನಡೆಯುವಂತೆ ಮಾಡು.