See also 2regular  3regular
1regular ರೆಗ್ಯುಲರ್‍
ಗುಣವಾಚಕ
  1. (ಕ್ರೈಸ್ತಧರ್ಮ) ಧಾರ್ಮಿಕ:
    1. ಧಾರ್ಮಿಕ ನಿಯಮಕ್ಕೆ ಕಟ್ಟುಬಿದ್ದ.
    2. ಧಾರ್ಮಿಕ ಯಾ ಸಂನ್ಯಾಸಿ ಪಂಥಕ್ಕೆ ಸೇರಿದ: the regular clergy (ರೋಮನ್‍ ಕ್ಯಾಥೊಲಿಕ್‍ ದೇಶಗಳಲ್ಲಿ ಪ್ಯಾರಿಷ್‍ ಪಾದ್ರಿಗಳಿಗೆ ಭಿನ್ನವಾಗಿ) ಕೇಂದ್ರೀಯ ಚರ್ಚುಗಳಿಗೆ ಸೇರಿದ ಸಂನ್ಯಾಸಿ ವರ್ಗ.
  2. (ಆಕಾರ, ರಚನೆ, ಜೋಡಣೆ ಮೊದಲಾದವುಗಳಲ್ಲಿ ಯಾ ಈ ಲಕ್ಷಣಗಳನ್ನುಳ್ಳ ವಸ್ತುಗಳಲ್ಲಿ) (ಅವಯವ) ಸಾಮರಸ್ಯವುಳ್ಳ; ಸಮಪ್ರಮಾಣದ; ಸುಸಮ್ಮಿತ; ಸರ್ವಾಂಗ ಸಮನಾದ: regular features ಸಮಪ್ರಮಾಣದ ಮುಖಲಕ್ಷಣಗಳು. regular flower ಸರ್ವಾಂಗ ಸಮನಾದ ಹೂವು.
  3. ಕ್ಲುಪ್ತ; ನಿಯತ; ಕ್ಲುಪ್ತಕಾಲದಲ್ಲಿ ಯಾ ರೀತಿಯಲ್ಲಿ, ಏಕರೀತಿಯಲ್ಲಿ ಯಾ ನಿರೀಕ್ಷಿತ ರೀತಿಯಲ್ಲಿ ತಪ್ಪದೆ, ಕ್ರಮವಾಗಿ
    1. ಮಾಡಿದ ಯಾ ನಡೆದ, ಮಾಡುವ ಯಾ ನಡೆಯುವ.
    2. ಮತ್ತೆ ಮತ್ತೆ ಬರುವ ಯಾ ಆಗುವ: regular working ಕ್ಲುಪ್ತ (ಕಾಲದ ಯಾ ರೀತಿಯ) ಕೆಲಸ: regular sequence ನಿಯತ–ಕ್ರಮ, ಸರಣಿ; ಕ್ಲುಪ್ತ ಕಾಲದಲ್ಲಿ ಯಾ ರೀತಿಯಲ್ಲಿ ಮತ್ತೆ ಮತ್ತೆ ಬರುವ ಯಾ ನಡೆಯುವ ಘಟನೆ.
    3. ರೂಢಿಯ; ರೂಢಿಯಾಗಿ ಬಂದ; ವಾಡಿಕೆಯಾದ: regular bowels ರೂಢಿಯಾಗಿ ನಡೆಯುವ ಮಲವಿಸರ್ಜನೆ.
    4. ಕಟ್ಟಳೆಯ ಪ್ರಕಾರದ; ನಿಗದಿಯಾದ ರೀತಿಯ; ನಿಯತವಾದ; ಕ್ರಮಬದ್ಧವಾದ: regular salary ಕ್ರಮಬದ್ಧವಾದ ಸಂಬಳ.
    5. (ಹೆಂಗಸರ ವಿಷಯದಲ್ಲಿ) ಕಾಲಕಾಲಕ್ಕೆ ರಜಸ್ರಾವವಾಗುವ, ಮುಟ್ಟಾಗುವ.
    6. ವ್ಯವಸ್ಥಿತ; ಕ್ರಮಬದ್ಧ: regular pulse ಕ್ರಮಬದ್ಧವಾದ ನಾಡಿ (ಬಡಿತ).
    7. ನಿಯತ; ವ್ಯವಸ್ಥಿತ; ಕ್ರಮಬದ್ಧ: regular orbit ನಿಯತ ಪಥ.
  4. ಶಿಷ್ಟಾಚಾರಕ್ಕನುಗುಣವಾದ; ವಿಧಿಬದ್ಧವಾದ; ವಿಹಿತವಾದ ಮರ್ಯಾದೆಯಿಂದ ಕೂಡಿದ; ಸಾಂಪ್ರದಾಯಿಕ: the steps taken by the Foreign Office were quite regular ವಿದೇಶಾಂಗ ಕಚೇರಿಯು ತೆಗೆದುಕೊಂಡ ಕ್ರಮಗಳು ಶಿಷ್ಟಾಚಾರಕ್ಕನುಗುಣವಾಗಿದ್ದುವು.
  5. (ವ್ಯಾಕರಣ) (ಪ್ರಕೃತಿ, ಧಾತು ಮೊದಲಾದವುಗಳ ವಿಷಯದಲ್ಲಿ) ಕ್ರಮಬದ್ಧವಾದ ರೂಪನಿಷ್ಪತ್ತಿಯುಳ್ಳ.
  6. ತಕ್ಕ ಶಿಕ್ಷಣ, ತರಬೇತು ಯಾ ಅರ್ಹತೆ–ಉಳ್ಳ; ಕಸಬುದಾರನಾದ; ಯಾವುದೇ ವೃತ್ತಿಯನ್ನು ಯಾ ಕಸಬನ್ನು ಸಂಪೂರ್ಣವಾಗಿ ಇಲ್ಲವೆ ಪ್ರಧಾನವಾಗಿ ಅನುಸರಿಸುವ: she cooks as well as a regular cook ಆಕೆ ಕಸಬುದಾರಳಂತೆಯೇ ಅಡುಗೆ ಮಾಡುತ್ತಾಳೆ. regular soldiers ಸುಶಿಕ್ಷಿತ ಸೈನಿಕ ವೃತ್ತಿಯವರು.
  7. (ಆಡುಮಾತು) ಪೂರಾ; ಪಕ್ಕಾ; ಅಪ್ಪಟ; ಸಂಪೂರ್ಣ: a regular rascal ಪೂರಾ, ಪಕ್ಕಾ–ನೀಚ. a regular smash ಪೂರ್ತಿಧ್ವಂಸ.
  8. ಸಕ್ರಮ:
    1. (ಜ್ಯಾಮಿತಿ) (ಆಕೃತಿಯ ವಿಷಯದಲ್ಲಿ) ಎಲ್ಲ ಭುಜಗಳೂ ಎಲ್ಲ ಕೋನಗಳೂ ಸಮವಾಗಿರುವ.
    2. (ಜ್ಯಾಮಿತೀಯ ಘನಾಕೃತಿಯ ವಿಷಯದಲ್ಲಿ) ಸಮಮುಖಿ; ಸರ್ವಸಮನಾದ ಮುಖಗಳಿಂದ ರೂಪಿತವಾದ.
    3. (ಸಸ್ಯವಿಜ್ಞಾನ) (ಪುಷ್ಪದ ವಿಷಯದಲ್ಲಿ) ಸಮ್ಮಿತ; ತ್ರಿಜ್ಯೀಯ ಸಮ್ಮಿತಿಯುಳ್ಳ.
ಪದಗುಚ್ಛ
  1. keep regular hours ಮಾಮೂಲು ಕೆಲಸಗಳನ್ನು ಮಾಡು; ಮಾಮೂಲಾಗಿ ವರ್ತಿಸು; ನಿಯತವಾದ ರೀತಿಯಲ್ಲಿ ಎಲ್ಲ ವ್ಯವಹಾರಗಳನ್ನೂ ನಡೆಸು; ದಿನಚರಿಯ ಕೆಲಸಗಳನ್ನು ಕ್ರಮಬದ್ಧವಾಗಿ ವರ್ತಿಸು; ಮುಖ್ಯವಾಗಿ ಪ್ರತಿನಿತ್ಯ ಮಲಗುವುದು, ಏಳುವುದು ಒಂದೇ ಸಮಯದಲ್ಲಿ ಮಾಡು.
  2. a regular life (ಯಾವ ಅತಿರೇಕವೂ ಇಲ್ಲದ) ಕ್ರಮಬದ್ಧವಾದ, ವ್ಯವಸ್ಥಿತವಾದ–ಜೀವನ.
  3. regular people ವ್ಯವಸ್ಥಿತ ಜೀವಿಗಳು; ಕ್ರಮಬದ್ಧವಾಗಿ ಬದುಕುವವರು.
See also 1regular  3regular
2regular ರೆಗ್ಯುಲರ್‍
ಕ್ರಿಯಾವಿಶೇಷಣ

(ಆಡುಮಾತು) ಪೂರಾ; ತೀವ್ರ; ಉಗ್ರವಾದ: he is regular angry ಅವನಿಗೆ ಉಗ್ರವಾದ ಕೋಪಬಂದಿದೆ.

See also 1regular  2regular
3regular ರೆಗ್ಯುಲರ್‍
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍ ದೇಶಗಳಲ್ಲಿ ಪ್ಯಾರಿಷ್‍ ಪಾದ್ರಿಗಳಿಗೆ ಭಿನ್ನವಾಗಿ) ಕೇಂದ್ರೀಯ ಚರ್ಚಿನ ಪಾದ್ರಿ.
  2. ಸೈನಿಕ ವೃತ್ತಿಯವನು; ಕ್ರಮಬದ್ಧ ಸೈನಿಕ.
  3. (ಆಡುಮಾತು)
    1. ಕಾಯಂ ನೌಕರ; ಕಾಯಂ ಆಗಿ ನೇಮಕಗೊಂಡ ವ್ಯಕ್ತಿ.
    2. ಮಾಮೂಲಿ ಆಸಾಮಿ; ನಿಯತವಾಗಿ ವ್ಯಾಪಾರ, ಭೇಟಿ ಮೊದಲಾದವುಗಳಿಗಾಗಿ ಬರುವ ಗಿರಾಕಿ, ಅತಿಥಿ ಮೊದಲಾದವರು.