region ರೀಜನ್‍
ನಾಮವಾಚಕ
  1. (ಹೆಚ್ಚುಕಡಮೆ ನಿರ್ದಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನುಳ್ಳ) ಪ್ರದೇಶ; ಪ್ರಾಂತ; ನಿಟ್ಟು: a mountainous region ಪರ್ವತ ಪ್ರದೇಶ; ಬೆಟ್ಟಗಾಡು. the earth’s natural regions ಭೂಮಿಯ ಸ್ವಾಭಾವಿಕ ಪ್ರದೇಶಗಳು.
  2. (ಮುಖ್ಯವಾಗಿ ಸ್ಕಾಟ್ಲೆಂಡಿನ, ಆಡಳಿತಕ್ಕಾಗಿ ಮಾಡಿಕೊಂಡ) ಜಿಲ್ಲೆ; ಪ್ರದೇಶ.
  3. (ಹಲವೊಮ್ಮೆ ಬಹುವಚನದಲ್ಲಿ) (ಪ್ರಪಂಚದ ಯಾ ವಿಶ್ವದ) ಒಂದು ಪ್ರತ್ಯೇಕ ಪ್ರದೇಶ, ಲೋಕ.
  4. ಕ್ಷೇತ್ರ; ಲೋಕ; ಪ್ರಪಂಚ: you are getting into the region of metaphysics ನೀನು ಆಧ್ಯಾತ್ಮಿಕಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದೀಯೆ.
  5. (ವಾಯುಮಂಡಲ ಯಾ ಸಮುದ್ರದ ಎತ್ತರ ಯಾ ಆಳಕ್ಕೆ ಅನುಸಾರವಾದ) ಪದರ; ಮಟ್ಟ; ಸ್ತರ.
  6. (ದೇಹದ ಯಾವುದೇ ಅವಯವದ ಹತ್ತಿರದ ಯಾ ಸುತ್ತಣ) ಪ್ರದೇಶ; ಭಾಗ: the lumbar region ಕಟಿಪ್ರದೇಶ; ಸೊಂಟದ ಭಾಗ.
ಪದಗುಚ್ಛ

in the region of (ಸರಿ) ಸುಮಾರು; ಹತ್ತಿರ ಹತ್ತಿರ.