regeneration ರಿಜೆನರೇಷನ್‍
ನಾಮವಾಚಕ
    1. (ಆಧ್ಯಾತ್ಮಿಕವಾಗಿ) ಪುನರ್ಜನ್ಮ ಕೊಡುವುದು; ಆತ್ಮೋನ್ನತಿಯನ್ನುಂಟು ಮಾಡುವುದು.
    2. ಪುನರ್ಜನ್ಮ; ಆತ್ಮೋನ್ನತಿ.
  1. (ವ್ಯಕ್ತಿ, ಸಂಸ್ಥೆ ಮೊದಲಾದವುಗಳ) ನೈತಿಕ ಸುಧಾರಣೆ ಯಾ ಪುನರುಜ್ಜೀವನ.
  2. ಪುನಃ ಹುಟ್ಟಿಸುವುದು, ಉಂಟುಮಾಡುವುದು.
  3. (ಜೀವವಿಜ್ಞಾನ) (ಊತಕವನ್ನು) ಮತ್ತೆ ಬೆಳೆಸುವುದು.
  4. (ರಸಾಯನವಿಜ್ಞಾನ) (ರಾಸಾಯನಿಕ ಕ್ರಿಯೆಯಲ್ಲಿ ವ್ಯಯವಾದ ವಸ್ತುವಿನ) ಪುನರುತ್ಪಾದನೆ.