regency ರೀಜನ್ಸಿ
ನಾಮವಾಚಕ
(ಬಹುವಚನ regencies).
  1. (ವಿರಳ ಪ್ರಯೋಗ) ಆಳ್ವಿಕೆ; ಪ್ರಭುತ್ವ.
  2. (ಯಾವುದೇ ರಾಜನು ಪ್ರಾಪ್ತವಯಸ್ಕನಾಗುವ ಮೊದಲು ರಾಜಕುಮಾರನ ಪರವಾಗಿ ಆಡಳಿತ ನಡೆಸುವ) ರಾಜಪ್ರತಿನಿಧಿಯ ಪದವಿ, ಹುದ್ದೆ, ಆಳ್ವಿಕೆ ಯಾ ಅಧಿಕಾರ.
  3. (ರಾಜಕುಮಾರನ ಪರವಾಗಿ ಆಡಳಿತ ನಡೆಸುವ) ರಾಜಪ್ರತಿನಿಧಿ ಮಂಡಲಿ.
  4. ರಾಜಪ್ರತಿನಿಧಿಯ ಯಾ ರಾಜಪ್ರತಿನಿಧಿ ಮಂಡಲಿಯ–ಆಡಳಿತಾವಧಿ.
ಪದಗುಚ್ಛ

the Regency ರೀಜನ್ಸಿ ಕಾಲ; ಬ್ರಿಟನ್ನಿನಲ್ಲಿ 1811-20ರವರೆಗೆ ಮತ್ತು ಹ್ರಾನ್ಸ್‍ನಲ್ಲಿ 1715ರಿಂದ 1723ರ ವರೆಗೆ ಇದ್ದ ರಾಜ ಪ್ರತಿನಿಧಿ ಮಂಡಲಿಯ ಆಡಳಿತ.