See also 2regard
1regard ರಿಗಾರ್ಡ್‍
ಸಕರ್ಮಕ ಕ್ರಿಯಾಪದ
  1. ಎವೆಯಿಕ್ಕದೆ ನೋಡು; ದಿಟ್ಟಿಸು: I found him regarding me with curiosity ಅವನು ನನ್ನನ್ನು ಕುತೂಹಲದಿಂದ ದಿಟ್ಟಿಸುತ್ತಿರುವುದನ್ನು ಕಂಡೆ.
  2. ಲೆಕ್ಕಿಸು; ಲಕ್ಷ್ಯಗೊಡು; ಗಣನೆಗೆ ತೆಗೆದುಕೊ; ಮನಸ್ಸಿಗೆ ತಂದುಕೊ (ಮುಖ್ಯವಾಗಿ ನಿಷೇಧಾರ್ಥದಲ್ಲಿ): he does not regard my advice ಅವನು ನನ್ನ ಬುದ್ಧಿವಾದವನ್ನು ಲೆಕ್ಕಿಸುವುದಿಲ್ಲ.
  3. (ಭಕ್ತಿ, ಭೀತಿ ಮೊದಲಾದ ಭಾವದಿಂದ) ಭಾವಿಸು; ಕಾಣು: I still regard him kindly ನಾನವನನ್ನು ಈಗಲೂ ಪ್ರೀತಿಯಿಂದ ಕಾಣುತ್ತೇನೆ.
  4. ಎಣಿಸು; ಪರಿಗಣಿಸು; ಭಾವಿಸು: he regarded it as indispensable ಅವನು ಅದನ್ನು ಅನಿವಾರ್ಯವೆಂದು ಎಣಿಸಿದ. I regard it as an insult ನಾನದನ್ನು ಅಪಮಾನವೆಂದು ಭಾವಿಸುತ್ತೇನೆ.
  5. (ವಸ್ತು, ವಿಷಯ ಮೊದಲಾದವುಗಳ ವಿಷಯದಲ್ಲಿ) ಸಂಬಂಧಪಡು; ಸಂಬಂಧಿಸು: that matter does not regard me ಆ ವಿಷಯ ನನಗೆ ಸಂಬಂಧಿಸಿದ್ದಲ್ಲ.
ಅಕರ್ಮಕ ಕ್ರಿಯಾಪದ

ಗಮನಿಸು; ಗಮನ ಕೊಡು.

ಪದಗುಚ್ಛ

as regards –ನ್ನು ಕುರಿತು; –ಕ್ಕೆ ಸಂಬಂಧಿಸಿದಂತೆ: as regards wheat, prices are rising ಗೋಧಿಯನ್ನು ಕುರಿತು ಹೇಳುವುದಾದರೆ, ಬೆಲೆಗಳು ಏರುತ್ತಿವೆ.

See also 1regard
2regard ರಿಗಾರ್ಡ್‍
ನಾಮವಾಚಕ
  1. ನೆಟ್ಟನೋಟ; ಎವೆಯಿಕ್ಕದ ದೃಷ್ಟಿ; ಒಂದೇ ಸಮನೆ ನೋಡುವ ಯಾ ಅರ್ಥಪೂರ್ಣವಾದ ನೋಟ.
  2. (ಪ್ರಕೃತ, ಪ್ರಸ್ತುತ) ವಿಷಯ; ಅಂಶ: in this regard ಈ ವಿಷಯದಲ್ಲಿ.
  3. ಗಮನ; ಲಕ್ಷ್ಯ; ಅವಧಾನ: he pays no regard to any one’s advice ಅವನು ಯಾರ ಬುದ್ಧಿವಾದಕ್ಕೂ ಗಮನ ಕೊಡುವುದಿಲ್ಲ.
  4. ಗೌರವ; ಮರ್ಯಾದೆ; ಆದರಾಭಿಮಾನ: I have a high regard for him ನನಗೆ ಆತನ ವಿಷಯದಲ್ಲಿ ತುಂಬ ಗೌರವವಿದೆ.
  5. (ಬಹುವಚನದಲ್ಲಿ) (ಯೋಗಕ್ಷೇಮ ಕಾಗದ, ಆಹ್ವಾನ ಮೊದಲಾದವುಗಳಲ್ಲಿ ಬಳಸುವ ಉಪಚಾರೋಕ್ತಿ) ಅಭಿನಂದನೆಗಳು; ಅಭಿವಂದನೆಗಳು: kind regards to you all ನಿಮಗೆಲ್ಲ ನನ್ನ ಗೌರವಪೂರ್ಣವಾದ ಅಭಿನಂದನೆಗಳು, ಅಭಿವಂದನೆಗಳು.
ಪದಗುಚ್ಛ

in (or with) regard to ಈ ವಿಷಯದಲ್ಲಿ; ಈ ವಿಷಯಕ್ಕೆ ಸಂಬಂಧಿಸಿದಂತೆ.