refusal ರಿಹ್ಯೊಸಲ್‍
ನಾಮವಾಚಕ
  1. ನಿರಾಕರಣೆ:
    1. ತೆಗೆದುಕೊಳ್ಳಲು ಒಪ್ಪದಿರುವಿಕೆ; ಅನಂಗೀಕಾರ: refusal of the invitation ಆಹ್ವಾನದ ಅನಂಗೀಕಾರ; ಆಹ್ವಾನವನ್ನು ಒಪ್ಪದಿರುವುದು.
    2. ಕೊಡಲು ಒಪ್ಪದಿರುವಿಕೆ; ಇಲ್ಲವೆನ್ನುವುದು; ನಕಾರ ಹೇಳುವುದು; ನಿರಾಕರಿಸುವುದು: refusal of permission ಅಪ್ಪಣೆ ಕೊಡಲು, ಅನುಮತಿ ಕೊಡಲು–ನಿರಾಕರಿಸುವುದು.
    3. ಮಾಡಲು ಒಪ್ಪದಿರುವುದು; ಒಲ್ಲೆನೆನ್ನುವುದು: refusal to discuss the matter ವಿಷಯವನ್ನು ಚರ್ಚಿಸಲು ನಿರಾಕರಿಸುವುದು.
    4. (ಯಾರಿಗೇ) ಮಣಿಯಲು ಒಪ್ಪದಿರುವುದು.
    5. (ಕುದುರೆಯ ವಿಷಯದಲ್ಲಿ ಅಡೆತಡೆಯನ್ನು), ಹಾರಲು ನಿರಾಕರಿಸುವುದು; ಹಾರಲೊಲ್ಲದೆ ಮೊಂಡುತನಮಾಡುವುದು ( ಅಕರ್ಮಕ ಕ್ರಿಯಾಪದ ಸಹ).
  2. ನಿರಾಕರಣೆ ಹಕ್ಕು; (ಇತರರಿಗೆ ಒಂದು ವಸ್ತುವನ್ನು) ನೀಡುವ ಮುನ್ನ ತನಗೆ ನೀಡಬೇಕೆಂಬ, ಹಾಗೆ ನೀಡಿದ ವಸ್ತುವನ್ನು ತೆಗೆದುಕೊಳ್ಳುವ ಯಾ ಬೇಡವೆನ್ನುವ ಹಕ್ಕು: stipulate for the right of refusal (ತೆಗೆದುಕೊಳ್ಳುವ ಇಲ್ಲವೆ ಬಿಡುವ ಹಕ್ಕು ತನ್ನದಾಗಿರಬೇಕೆಂಬ) ನಿರಾಕರಣೆ ಷರತ್ತನ್ನು ಹಾಕು.
ಪದಗುಚ್ಛ
  1. first refusal = refusal\((2)\).
  2. take no refusal ನಿರಾಕರಣೆಗೆ ಒಪ್ಪದಿರು, ಸಮ್ಮತಿಸದಿರು; ಬೇಡ, ಇಲ್ಲ, ಒಲ್ಲೆ, ಎಂದರೆ ಬಿಡದಿರು: I will take no refuse ಬೇಡ, ಇಲ್ಲ, ಒಲ್ಲೆ, ಎಂದರೆ ಬಿಡೆ, ಕೇಳುವುದಿಲ್ಲ.