See also 2refuge
1refuge ರೆಹ್ಯೂಜ್‍
ನಾಮವಾಚಕ
  1. (ಬೆನ್ನಟ್ಟಿ ಬರುವ ವ್ಯಕ್ತಿ ಯಾ ಪ್ರಾಣಿಗಳಿಂದ, ಯಾ ಬೇರಾವುದೇ ಅಪಾಯದಿಂದ, ಯಾ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಲು ಅರಸುವ) ಮರೆ; ಕಾಪು; ಆಶ್ರಯ; ರಕ್ಷಣ ಸ್ಥಾನ: seek refuge ಮರೆಯನ್ನು, ಆಶ್ರಯವನ್ನು–ಹುಡುಕು. take refuge in a cave ಗುಹೆಯಲ್ಲಿ ರಕ್ಷಣೆ, ಆಶ್ರಯ ಪಡೆ.
  2. (ಕಷ್ಟ, ಅಪಾಯಗಳಲ್ಲಿರುವವರಿಗೆ ಆಶ್ರಯ ನೀಡುವ, ಯಾ ಕಷ್ಟ, ಅಪಾಯಗಳಿಗೊಳಪಟ್ಟವರು ಎಲ್ಲಿ ಆಶ್ರಯ ಪಡೆಯುವರೋ ಅಂಥ) ಮರೆ; ಗತಿ; ಕಾಪು; ರಕ್ಷಣೆ; ಶರಣು; ಆಶ್ರಯ (ವ್ಯಕ್ತಿ, ಸ್ಥಾನ ಯಾ ಉಪಾಯ): he is the refuge of the distressed ದುಃಖಿಗಳಿಗೆ ಅವನು ಆಶ್ರಯ.
  3. (ವಾಹನ ಸಂಚಾರವು ಹೆಚ್ಚಾಗಿರುವ ರಸ್ತೆಯಲ್ಲಿ ಅಡ್ಡಹಾಯುವ ಕಾಲುನಡಗೆಯವರು ನಡುವೆ ನಿಲ್ಲಲು ಮಾಡಿರುವ) ಕಾಪು ಜಗುಲಿ.
ಪದಗುಚ್ಛ
  1. city of refuge (ಮೋಸೆಸ್‍ನ ಆಡಳಿತದಲ್ಲಿ ತಿಳಿಯದೆ ಮಾಡಿದ ಮಾನವಹತ್ಯೆಯಿಂದ ಒದಗುವ ದಂಡನೆ ಯಾ ಅಪಾಯವನ್ನು ತಪ್ಪಿಸಲು ಅಂತಹ ತಪ್ಪಿತಸ್ಥರಿಗೆ ಕಟ್ಟಿದ) ದುರ್ಗ; ಕೋಟೆಯಿಂದ ರಕ್ಷಿತವಾದ ನಗರ.
  2. house of refuge ಅನಾಥಾಲಯ; ನಿರ್ಗತಿಕರಿಗೆ ಅನ್ನ ವಸತಿಗಳನ್ನು ಒದಗಿಸುವ ಆಶ್ರಯಸ್ಥಾನ.
See also 1refuge
2refuge ರೆಹ್ಯೂಜ್‍
ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ)

  1. ಆಶ್ರಯ ಕೊಡು.
  2. ಮರೆಹೋಗು; ಆಶ್ರಯ ಪಡೆ.